ಅಂಗಣಕ್ಕೆ ಇಳಿಯಲಿರುವ ಲೀ ಚಾಂಗ್‌

7

ಅಂಗಣಕ್ಕೆ ಇಳಿಯಲಿರುವ ಲೀ ಚಾಂಗ್‌

Published:
Updated:
Deccan Herald

ಕ್ವಾಲಾಲಂಪುರ: ಮೂಗಿನ ಕ್ಯಾನ್ಸರ್‌ಗೆ ತುತ್ತಾಗಿರುವ ಮಲೇಷ್ಯಾದ ಬ್ಯಾಡ್ಮಿಂಟನ್ ಆಟಗಾರ ಲೀ ಚಾಂಗ್ ವೀ ಮಾರ್ಚ್‌ನಲ್ಲಿ ನಡೆಯಲಿರುವ ಆಲ್ ಇಂಗ್ಲೆಂಡ್ ಓಪನ್‌ ಟೂರ್ನಿಯಲ್ಲಿ ಅಂಗಣಕ್ಕೆ ಮರಳಲು ಸಜ್ಜಾಗಿದ್ದಾರೆ.

‘ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದ್ದು ನಿವೃತ್ತಿಯಾಗುವ ಉದ್ದೇಶವಿಲ್ಲ, ಶೀಘ್ರದಲ್ಲೇ ತರಬೇತಿಗೆ ಹಾಜರಾಗಲಿದ್ದೇನೆ’ ಎಂದು ಅವರು ಗುರುವಾರ ಹೇಳಿದ್ದಾರೆ. ತೈವಾನ್‌ನಲ್ಲಿ ಚಿಕಿತ್ಸೆ ಮುಗಿಸಿದ ಅವರು ಕಳೆದ ತಿಂಗಳ ಅಂತ್ಯದಲ್ಲಿ ವಾಪಸಾಗಿದ್ದರು.

‘ಟೋಕಿಯೊದಲ್ಲಿ 2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದು ನನ್ನ ಕನಸು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಿದೆ ಎಂಬ ಸಂಪೂರ್ಣ ಭರವಸೆ ಇದೆ. ನಾನು ನನ್ನ ದೇಶವನ್ನು ಪ್ರೀತಿಸುತ್ತಿದ್ದೇನೆ. ಆದ್ದರಿಂದ ಸಂಪೂರ್ಣ ಸಾಮರ್ಥ್ಯವನ್ನು ಹೊರಗೆಡವಿ ಆಡಲಿದ್ದೇನೆ’ ಎಂದು ಲೀ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !