ನವದೆಹಲಿ: ಭಾರತದ ಹಿರಿಯ ಬಾಕ್ಸರ್ ಡಿಂಕೊ ಸಿಂಗ್ ಅವರಿಗೆ ಕೋವಿಡ್–19 ಇರುವುದು ದೃಢಪಟ್ಟಿದೆ.

ಅವರ ಆಪ್ತರೊಬ್ಬರು ಭಾನುವಾರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

41 ವರ್ಷ ವಯಸ್ಸಿನ ಡಿಂಕೊ ಅವರು ಈಗಾಗಲೇ ಪಿತ್ತಜನಕಾಂಗದ ಕ್ಯಾನ್ಸರ್ ಹಾಗೂ ಕಾಮಾಲೆ ರೋಗಗಳಿಂದ ಬಳಲುತ್ತಿದ್ದಾರೆ.

‘ರೇಡಿಯೇಷನ್ ಥೆರಪಿ ಮಾಡಿಸಿಕೊಳ್ಳುವ ಸಲುವಾಗಿ ಡಿಂಕೊ ಅವರು ಈ ತಿಂಗಳ ಆರಂಭದಲ್ಲಿ ನವದೆಹಲಿಗೆ ಪ್ರಯಾಣ ಮಾಡಿದ್ದರು. ಚಿಕಿತ್ಸೆಗಾಗಿ ಅಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಅಲ್ಲಿಂದ ಮರಳುವ ಮುನ್ನ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಆಗ ಅವರಿಗೆ ಸೋಂಕು ತಗುಲಿಲ್ಲ ಎಂಬುದು ವರದಿಯಿಂದ ಖಚಿತವಾಗಿತ್ತು. ಮಣಿಪುರಕ್ಕೆ ಬಂದ ಬಳಿಕ ಅವರಿಗೆ ಕೋವಿಡ್ ಇರುವುದು ಖಾತರಿಯಾಗಿದೆ’ ಎಂದು ಆಪ್ತರೊಬ್ಬರು ತಿಳಿಸಿದ್ದಾರೆ.

‘ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅವರು ಮಣಿಪುರಕ್ಕೆ ಬಂದಿದ್ದರು. ಆಂಬುಲೆನ್ಸ್‌ನಲ್ಲಿ ರಸ್ತೆಯ ಮೂಲಕ 2400 ಕಿಲೊ ಮೀಟರ್ಸ್ ಪ್ರಯಾಣ ಮಾಡಿದ್ದರು. ಈ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ’ ಎಂದೂ ಅವರು ಹೇಳಿದ್ದಾರೆ.

ಡಿಂಕೊ ಅವರು 1998ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು. ಬಾಂಥಮ್‌ವೇಟ್ ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. ಅದೇ ವರ್ಷ ಅವರಿಗೆ ಅರ್ಜುನ ಪ್ರಶಸ್ತಿ ಒಲಿದಿತ್ತು. 2013ರಲ್ಲಿ ಅವರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.