ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್: ಅಧಿಬಾನ್‌, ಗಂಗೂಲಿಗೆ ಸ್ಥಾನ

Last Updated 27 ಫೆಬ್ರುವರಿ 2019, 15:39 IST
ಅಕ್ಷರ ಗಾತ್ರ

ಚೆನ್ನೈ: ಗ್ರ್ಯಾಂಡ್‌ಮಾಸ್ಟರ್‌ಗಳಾದ ಬಿ.ಅಧಿಬಾನ್‌ ಮತ್ತು ಸೂರ್ಯಶೇಖರ್‌ ಗಂಗೂಲಿ ಅವರು ವಿಶ್ವ ತಂಡ ಚೆಸ್‌ ಚಾಂಪಿಯನ್‌ಷಿಪ್‌ಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಪ್ರಮುಖ ಆಟಗಾರರಾದ ವಿಶ್ವನಾಥನ್ ಆನಂದ್‌, ವಿದಿತ್‌ ಸಂತೋಷ್‌ ಗುಜರಾತಿ ಮತ್ತು ಪಿ.ಹರಿಕೃಷ್ಣ ಅವರು ಚಾಂಪಿಯನ್‌ಷಿಪ್‌ಗೆ ಗೈರಾಗಿದ್ದಾರೆ. ಹೀಗಾಗಿ ಅಖಿಲ ಭಾರತ ಚೆಸ್‌ ಫೆಡರೇಷನ್‌, ಅಧಿಬಾನ್‌ ಮತ್ತು ಗಂಗೂಲಿಗೆ ಅವಕಾಶ ನೀಡಿದೆ. ಕೃಷ್ಣನ್‌ ಶಶಿಕಿರಣ್‌, ಎಸ್‌.ಪಿ.ಸೇತುರಾಮನ್‌ ಮತ್ತು ಅರವಿಂದ್‌ ಚಿದಂಬರಂ ಅವರೂ ತಂಡದಲ್ಲಿದ್ದಾರೆ.

ಇಂಟರ್‌ನ್ಯಾಷನಲ್‌ ಮಾಸ್ಟರ್‌ ಸೌಮ್ಯ ಸ್ವಾಮಿನಾಥನ್‌, ತಾನಿಯಾ ಸಚದೇವ್‌, ಈಶಾ ಕರವದೆ, ಭಕ್ತಿ ಕುಲಕರ್ಣಿ ಮತ್ತು ಪದ್ಮಿನಿ ರಾವುತ್‌ ಅವರು ಮಹಿಳಾ ತಂಡದಲ್ಲಿ ಸ್ಥಾನ ಹೊಂದಿದ್ದಾರೆ. ಸ್ವಪ್ನಿಲ್‌ ಧೋಪಡೆ ಅವರು ತಂಡದ ಕೋಚ್‌ ಮತ್ತು ನಾಯಕರಾಗಿದ್ದಾರೆ. ಶ್ರೀನಾಥ್‌ ನಾರಾಯಣನ್‌ ಅವರು ‍ಪುರುಷರ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 10 ತಂಡಗಳು ‍ಪ್ರಶಸ್ತಿಗಾಗಿ ಸೆಣಸಲಿವೆ. ಈ ಬಾರಿಯ ಚಾಂಪಿಯನ್‌ಷಿಪ್‌ ಮಾರ್ಚ್‌ 5ರಿಂದ ಕಜಕಸ್ತಾನದ ಅಸ್ತಾನದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT