ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೈಮಂಡ್‌ ಲೀಗ್‌ ಜಾವೆಲಿನ್‌ ಥ್ರೋ: ನೀರಜ್‌ ಚೋಪ್ರಾಗೆ ನಾಲ್ಕನೇ ಸ್ಥಾನ

Last Updated 31 ಆಗಸ್ಟ್ 2018, 15:28 IST
ಅಕ್ಷರ ಗಾತ್ರ

ಜುರಿಚ್‌ : ಏಷ್ಯನ್‌ ಕ್ರೀಡಾಕೂಟದ ಜಾವೆಲಿನ್‌ ಥ್ರೋನಲ್ಲಿ ಚಿನ್ನದ ಸಾಧನೆ ಮಾಡಿದ್ದ ಭಾರತದ ನೀರಜ್‌ ಚೋಪ್ರಾ ಅವರು ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಡೈಮಂಡ್‌ ಲೀಗ್‌ ಫೈನಲ್‌ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದರು.

ಗುರುವಾರ ತಡರಾತ್ರಿ ನಡೆದ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್‌ 85.73 ಮೀಟರ್ಸ್‌ ದೂರ ಜಾವೆಲಿನ್‌ ಎಸೆದರು. ಏಷ್ಯನ್‌ ಕ್ರೀಡಾಕೂಟದಲ್ಲಿ ಅವರು 88.06 ಮೀಟರ್ಸ್‌ ದೂರ ಜಾವೆಲಿನ್‌ ಎಸೆದು ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಹಿಂದಿಕ್ಕಿದ್ದರು.

ಐದನೇ ಅವಕಾಶದವರೆಗೂ ನೀರಜ್‌ ಅವರು ಮೂರನೇ ಸ್ಥಾನದಲ್ಲಿದ್ದರು. ಆದರೆ, ಕೊನೆಯ ಅವಕಾಶದಲ್ಲಿ ಒಲಿಂಪಿಕ್‌ ಚಾಂಪಿಯನ್‌ ಜರ್ಮನಿಯ ಥಾಮಸ್‌ ರೋಹ್ಲರ್‌ 85.76 ಮೀಟರ್ಸ್‌ ದೂರ ಜಾವೆಲಿನ್‌ ಎಸೆದರು.0.03 ಮೀಟರ್‌ ಅಂತರದಲ್ಲಿ ಭಾರತದ ಅಥ್ಲೀಟ್‌ ಕಂಚಿನ ಪದಕ ತಪ್ಪಿಸಿಕೊಂಡರು.

ಜರ್ಮನಿಯ ಆ್ಯಂಡ್ರಿಯಾಸ್‌ ಹಾಫ್‌ಮನ್‌ ಅವರು ಮೊದಲ ಸ್ಥಾನ ಪಡೆದರು. ಈ ಅಥ್ಲೀಟ್‌ ಮೂರನೇ ಅವಕಾಶದಲ್ಲಿ 91.44 ಮೀಟರ್ಸ್‌ ಸಾಮರ್ಥ್ಯ ಮೆರೆದರು. ಈಸ್ಟೋನಿಯಾದ ಮ್ಯಾಗ್ನಸ್‌ ಕಿರ್ಟ್‌ ಎರಡನೇ ಸ್ಥಾನ ಪಡೆದರು.ಅವರು 87.57 ಮೀಟರ್ಸ್ ಸಾಮರ್ಥ್ಯ ತೋರಿದರು.

ಜೆಕ್‌ ರಿಪಬ್ಲಿಕ್‌ನಲ್ಲಿ ಸೆಪ್ಟೆಂಬರ್‌ 8 ಹಾಗೂ 9ರಂದು ನಡೆಯಲಿರುವ ಐಎಎಎಫ್‌ ಕಾಂಟಿನೆಂಟಲ್‌ ಕಪ್‌ ಟೂರ್ನಿಯಲ್ಲಿ ನೀರಜ್‌ ಸ್ಪರ್ಧಿಸಲಿದ್ದಾರೆ.

ಸೆಮೆನ್ಯಾ ಸಾಧನೆ: ದಕ್ಷಿಣ ಆಫ್ರಿಕಾದ ಅಥ್ಲೀಟ್‌ ಕಾಸ್ಟರ್‌ ಸೆಮೆನ್ಯಾ ಅವರು ಮಹಿಳೆಯರ 800 ಮೀಟರ್ಸ್‌ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು.

ಅವರು 1 ನಿಮಿಷ 5.27 ಸೆಕೆಂಡುಗಳಲ್ಲಿ ದೂರ ಕ್ರಮಿಸಿದರು.

ಪುರುಷರ 200 ಮೀಟರ್ಸ್‌ ವಿಭಾಗದಲ್ಲಿ19.67 ಸೆಕೆಂಡುಗಳಲ್ಲಿ ದೂರ ಕ್ರಮಿಸಿದ ಅಮೆರಿಕದ ನೋ ಲೈಲ್ಸ್‌ ಅವರು ಮೊದಲ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT