ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್‌ ಕಂಚಿನ ಪದಕ: ಗುರು ತವರಿನಲ್ಲಿ ಕುಡಿಯೊಡೆದ ಸಂಭ್ರಮ

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದ ಕುಂದಾಪುರದ ವೇಟ್‌ಲಿಫ್ಟರ್‌
Last Updated 30 ಜುಲೈ 2022, 20:20 IST
ಅಕ್ಷರ ಗಾತ್ರ

ಕುಂದಾಪುರ: ಶನಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಜಯಿಸಿದ ಗುರುರಾಜ್ ಪೂಜಾರಿಯವರ ತವರೂರು ಕುಂದಾಪುರ ಸಮೀಪದ ವಂಡ್ಸೆಯಲ್ಲಿ ಸಂಭ್ರಮ ಕುಡಿಯೊಡೆಯಿತು. ಅಪ್ಪ, ಅಮ್ಮ ಮತ್ತು ಸಂಬಂಧಿಕರೆಲ್ಲರೂ ಸೇರಿ ಪರಸ್ಪರ ಅಭಿನಂದಿಸಿದರು. ಸಿಹಿ ಹಂಚಿ ಖುಷಿಪಟ್ಟರು.

2018ರಲ್ಲಿ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದ ಗುರುರಾಜ್ ಈ ಬಾರಿ 61 ಕೆ.ಜಿ. ವಿಭಾಗದಲ್ಲಿ ಕಂಚಿನ ಸಾಧನೆ ಮಾಡಿದರು. ವಂಡ್ಸೆ ಸಮೀಪದ ಚಿತ್ತೂರಿನಲ್ಲಿ ಗುರುರಾಜ್ ತಂದೆ ಮಹಾಬಲ ಪೂಜಾರಿ ಯವರು
ವಾಹನ ಚಾಲಕರಾಗಿದ್ದಾರೆ. ಕುಟುಂಬದ ತೀವ್ರ ಬಡತನದ ನಡುವೆಯೂ ಗುರುರಾಜ್ ಅಂತರಾಷ್ಟ್ರೀಯ ಕ್ರೀಡಾಪಟುವಾಗಿ ಬೆಳೆಯುವಲ್ಲಿ ಅವರು ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಸದ್ಯ ಅವರುಭಾರತೀಯ ವಾಯುಸೇನೆಯ ಉದ್ಯೋಗಿಯಾಗಿದ್ದಾರೆ.

ಇಲ್ಲಿಯ ಕೊಲ್ಲೂರು ಮೂಕಾಂಬಿಕಾ ಪ್ರೌಢಶಾಲೆಯಲ್ಲಿ ಕ್ರೀಡಾ ಶಿಕ್ಷಕ ಸುಕೇಶ್ ಶೆಟ್ಟಿ ಹೊಸ್ಮಠ ಅವರ ತರಬೇತಿಯಲ್ಲಿ ಕುಸ್ತಿಪಟುವಾಗಿ ಹೊರಹೊಮ್ಮಿದ್ದರು. ಬಳಿಕ ಉಜಿರೆಯ ಎಸ್ ಡಿ ಎಂ ಕಾಲೇಜಿನ ಕ್ರೀಡಾ ತರಬೇತುದಾರ ರಾಜೇಂದ್ರ ಪ್ರಸಾದ್ ಅವರ ತರಬೇತಿಯಲ್ಲಿ ವೇಟ್‌ಲಿಫ್ಟರ್ ಆಗಿ ರೂಪುಗೊಂಡರು.

2017 ದಿಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ. ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಚಿನ್ನ, ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇವರ ಕ್ರೀಡಾ ಸಾಧನೆ ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ 2018 ರಲ್ಲಿ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಕುಂದಾಪುರದಲ್ಲಿ ಸಂಭ್ರಮ :
ಸ್ನೇಹಿತ ಗುರುರಾಜ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದುಕೊಂಡ ಸುದ್ದಿಯನ್ನು ಕೇಳಿದ ಇಲ್ಲಿನ ಹರ್ಕ್ಯುಲಸ್ ಜಿಮ್ನಾಷಿಯಂನಲ್ಲಿಯೂ ವಿಜಯೋತ್ಸವ ನಡೆಯಿತು. ತರಬೇತುದಾರ ಸತೀಶ್ ಖಾರ್ವಿ ಅವರ ನೇತೃತ್ವದಲ್ಲಿ ಸಂಭ್ರಮ ಆಚರಿಸಿದ್ದಾರೆ.

ಮಗನ ಬಗ್ಗೆ ಹಮ್ಮೆಯಿದೆ:
‘ನನ್ನ ಮಗ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಗೆದ್ದು, ನಮ್ಮ ದೇಶಕ್ಕೆ ಕಂಚಿನ ಪದಕ ತಂದಿರುವುದು ಅತ್ಯಂತ ಖುಷಿ ನೀಡಿದೆ. ಸಾಕಷ್ಟು ತರಬೇತಿಯನ್ನು ಪಡೆದುಕೊಂಡಿದ್ದ. ಕಾಮನ್ವೇಲ್ತ್ ಗೆ ತೆರಳುವಾಗಲೇ ಕೈ ನೋವು ಮಾಡಿಕೊಂಡಿದ್ದ ಗುರು, ಏನು ಮಾಡುತ್ತಾನೋ ಎನ್ನುವ ಆತಂಕ ಇತ್ತು. ಪದಕ ಪಡೆದಿರುವ ಮಗನ ಬಗ್ಗೆ ಹೆಮ್ಮೆ ಇದೆ’ ಎಂದು ಗುರುರಾಜ್‌ ಅವರ ತಂದೆ ಮಹಾಬಲ ಪೂಜಾರಿ ಸಂತಸ ವ್ಯಕ್ತಪಡಿಸಿದರು.

ನಿರಂತರ ತರಬೇತಿ: ‘61 ಕೆಜಿ ವಿಭಾಗದಲ್ಲಿ ಭಾರತಕ್ಕೆ ಇದುರೆಗೂ ಪದಕ ಬಂದಿರಲಿಲ್ಲ ಎನ್ನುವ ಕಾರಣಕ್ಕಾಗಿ ಈ ಬಾರಿ ಪದಕ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದ ಗುರುರಾಜ್ ನಿರಂತರವಾಗಿ ತರಬೇತಿ ಪಡೆದು, ಕಠಿಣ ಪರಿಶ್ರಮದ ಭಾರತಕ್ಕೆ ಪದಕ ಗೆದ್ದು ಕೊಟ್ಟಿದ್ದಾರೆ’ ಎಂದು ಕ್ರೀಡಾ ಶಿಕ್ಷಕ ಸುರೇಶ್ ಶೆಟ್ಟಿ ಹೊಸ್ಮಠ ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT