ಬರ್ಲಿನ್: ಕೊರೊನಾ ವೈರಾಣುವಿನ ಉಪಟಳ ಹೆಚ್ಚುತ್ತಲೇ ಇರುವುದರಿಂದ ಈ ವರ್ಷದ ಜುಲೈ ಅಂತ್ಯದವರೆಗೂ ಯಾವುದೇ ಟೂರ್ನಿಗಳನ್ನು ನಡೆಸದಿರಲು ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ (ಐಟಿಟಿಎಫ್) ನಿರ್ಧರಿಸಿದೆ.

‘ಕೊರೊನಾ ಭೀತಿಯಿಂದಾಗಿ ಈ ಮೊದಲು ಎಲ್ಲಾ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು. ಕೆಲ ಟೂರ್ನಿಗಳನ್ನೂ ಮುಂದೂಡಲಾಗಿತ್ತು. ಈ ವರ್ಷದ ಜುಲೈ ಅಂತ್ಯದವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಆಗಸ್ಟ್ನಲ್ಲಿ ಟೇಬಲ್ ಟೆನಿಸ್ ಚಟುವಟಿಕೆಗಳು ಗರಿಗೆದರುವ ನಿರೀಕ್ಷೆ ಇದೆ. ಕೊರೊನಾದಿಂದಾಗಿ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ವೆಚ್ಚ ಕಡಿತಕ್ಕೆ ಮಾರ್ಗಗಳನ್ನು ಹುಡುಕುತ್ತಿದ್ದೇವೆ ’ ಎಂದು ಐಟಿಟಿಎಫ್, ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.