ಶುಕ್ರವಾರ, ನವೆಂಬರ್ 22, 2019
22 °C

ಒಲಿಂಪಿಯನ್ ಸೈಕ್ಲಿಸ್ಟ್ ಜಾಕ್ಸ್ ಇನ್ನಿಲ್ಲ

Published:
Updated:

ಪ್ಯಾರಿಸ್: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಸೈಕ್ಲಿಸ್ಟ್, ಫ್ರಾನ್ಸ್‌ನ ಜಾಕ್ಸ್ ಡ್ಯುಪಾಂಟ್ (91) ಸೋಮವಾರ ನಿಧನರಾದರು. ಲೆಜಾಟ್ ಸುರ್ ಲೆಜಿ ಗ್ರಾಮದಲ್ಲಿ ಜನಿಸಿದ್ದ ಜಾಕ್ಸ್ 1948ರ ಲಂಡನ್ ಒಲಿಂಪಿಕ್ಸ್‌ನ ಸಾವಿರ ಮೀಟರ್ಸ್ ಟೈಮ್ ಟ್ರಯಲ್ಸ್‌ನಲ್ಲಿ ಬೆಲ್ಜಿಯಂನ ಪಿರಿ ನಿಹಾಂತ್ ಅವರನ್ನು ಹಿಂದಿಕ್ಕಿ ಮೊದಲಿಗರಾಗಿದ್ದರು. ಆಗ ಅವರ ವಯಸ್ಸು 20 ವರ್ಷ ಆಗಿತ್ತು.

ಎರಡು ದಿನಗಳ ನಂತರ ರೋಡ್‌ ರೇಸ್‌ನಲ್ಲೂ ಪಾಲ್ಗೊಂಡಿದ್ದರು. ವೈಯಕ್ತಿಕ ವಿಭಾಗದಲ್ಲಿ 17ನೇ ಸ್ಥಾನ ಗಳಿಸಿ ನಿರಾಸೆ ಅನುಭವಿಸಿದ್ದರೂ ಜೋಸ್ ಬೆಯಾರ್ಟ್ ಮತ್ತು ಅಲೇನ್ ಮೊಯಿನು ಜೊತೆಗೂಡಿ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.

ವೃತ್ತಿಪರ ಸೈಕ್ಲಿಂಗ್‌ಗೆ ಕಾಲಿಟ್ಟ ಜಾಕ್ಸ್‌ 1954ರ ಫ್ರೆಂಚ್ ಚಾಂಪಿಯನ್‌ಷಿಪ್‌, 1951 ಮತ್ತು 1955ರ ಪ್ಯಾರಿಸ್ ಟೂರ್‌ನಲ್ಲಿ ಪ್ರಶಸ್ತಿ ಗಳಿಸಿದ್ದರು.

ಪ್ರತಿಕ್ರಿಯಿಸಿ (+)