ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ್‌, ಪ್ರಿಯಾಂಕಾ ಓಟದ ಸೊಗಸು

10 ಸಾವಿರ ಮೀ. ಓಟದಲ್ಲಿ ಅನಿಲ್‌, ಅರ್ಚನಾ ಪ್ರಥಮ
Last Updated 15 ಅಕ್ಟೋಬರ್ 2018, 19:08 IST
ಅಕ್ಷರ ಗಾತ್ರ

ಮೈಸೂರು: ಸಹಸ್ಪರ್ಧಿಗಳು ಒಡ್ಡಿದ ಸವಾಲನ್ನು ಸಮರ್ಥವಾಗಿ ಮೆಟ್ಟಿನಿಂತ ಮೈಸೂರಿನ ಸಾಗರ್‌ ಮತ್ತು ಪ್ರಿಯಾಂಕಾ ಅವರು ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಹರ್ಡಲ್ಸ್‌ನಲ್ಲಿ ಚಿನ್ನ ಜಯಿಸಿದರು.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಸಾಗರ್‌ 14.8 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಸಾಗರ್‌ಗೆ ಪ್ರಬಲ ಪೈಪೋಟಿ ಒಡ್ಡಿದ ದಕ್ಷಿಣ ಕನ್ನಡದ ಎಂ.ಡಿ.ಅಮರನಾಥ್ (15.2 ಸೆ.) ಬೆಳ್ಳಿ ಗೆದ್ದರೆ, ಮೈಸೂರಿನ ಸೂರ್ಯ (17 ಸೆ.) ಮೂರನೇ ಸ್ಥಾನ ಪಡೆದುಕೊಂಡರು.

ಮಹಿಳೆಯರ ವಿಭಾಗದಲ್ಲಿ ಪ್ರಿಯಾಂಕಾ 14.2 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಬೆಂಗಳೂರಿನ ಎಚ್‌.ವಿ.ಪೂಜಾ ಮತ್ತು ದಕ್ಷಿಣ ಕನ್ನಡದ ಶ್ರೀದೇವಿಕಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ದಕ್ಷಿಣ ಕನ್ನಡದ ಕೆ.ಎಂ.ಅರ್ಚನಾ ಅವರು ಮಹಿಳೆಯರ 10 ಸಾವಿರ ಮೀ. ಓಟದಲ್ಲಿ ಚಿನ್ನ ಗೆದ್ದು ದೂರ ಅಂತರದ ಓಟದಲ್ಲಿ ತನಗೆ ಸರಿಸಾಟಿಯಿಲ್ಲ ಎಂಬುದನ್ನು ಸಾಬೀತುಪಡಿಸಿದರು. ಭಾನುವಾರ ನಡೆದಿದ್ದ 5 ಸಾವಿರ ಮೀ. ಓಟದಲ್ಲೂ ಅವರು ಅಗ್ರಸ್ಥಾನ ಪಡೆದಿದ್ದರು.

ಮಹಿಳೆಯರ ವಿಭಾಗದಲ್ಲಿ ಪಾರಮ್ಯ ಮೆರೆದ ದಕ್ಷಿಣ ಕನ್ನಡ ಜಿಲ್ಲೆಯ ಅಥ್ಲೀಟ್‌ಗಳು ಹೈಜಂಪ್, 10 ಕಿ.ಮೀ. ನಡಿಗೆ ಮತ್ತು 10 ಸಾವಿರ ಮೀ. ಓಟದಲ್ಲಿ ಎಲ್ಲ ಮೂರೂ ಪದಕಗಳನ್ನು ತಮ್ಮದಾಗಿಸಿಕೊಂಡರು.

ಫಲಿತಾಂಶ: ಪುರುಷರ ವಿಭಾಗ: 110 ಮೀ. ಹರ್ಡಲ್ಸ್: ಆರ್‌.ಸಾಗರ್ (ಮೈಸೂರು)–1, ಎಂ.ಡಿ.ಅಮರನಾಥ್ (ದಕ್ಷಿಣ ಕನ್ನಡ)–2, ಸೂರ್ಯ (ಮೈಸೂರು)–3 ಕಾಲ: 14.8 ಸೆ.

400 ಮೀ. ಓಟ: ಮಿಜೊ ಚಾಕೊ ಕುರಿಯನ್‌ (ದಕ್ಷಿಣ ಕನ್ನಡ)–1, ಟಿ.ಎಚ್‌.ದೇವಯ್ಯ (ಬೆಂಗಳೂರು ಗ್ರಾಮಾಂತರ)–2, ಎನ್‌.ಆರ್‌.ಅಗ್ನೀಶ್ (ಮೈಸೂರು)–3 ಕಾಲ: 48.3 ಸೆ.

10 ಸಾವಿರ ಮೀ. ಓಟ: ಅನಿಲ್‌ ಕುಮಾರ್ (ದಕ್ಷಿಣ ಕನ್ನಡ)–1, ಆರ್‌.ಸಂದೀಪ್ (ದಕ್ಷಿಣ ಕನ್ನಡ)–2, ಜಿ.ಜೆ.ಚೇತನ್ (ಮೈಸೂರು)–3 ಕಾಲ: 33 ನಿ.41 ಸೆ.

ಡೆಕಥ್ಲಾನ್‌: ಎಂ.ಡಿ.ಸುಶಾಂತ್ (ಬೆಂಗಳೂರು)–1, ವಿ.ವೆಂಕಟೇಶ್ (ದಕ್ಷಿಣ ಕನ್ನಡ)–2, ಎಂ.ಕೌಶಿಕ್ (ಉಡುಪಿ)–3 ಪಾಯಿಂಟ್: 2,732

ಡಿಸ್ಕಸ್‌ ಥ್ರೋ: ಸಂಜೀವ್‌ ಕೆ.–1, ಎಸ್‌.ಅಜಯ್‌ ಕುಮಾರ್–2, ರಜತ್‌ ಜಿ.ನೆತ್ರಕಲ್–3 (ಎಲ್ಲರೂ ಬೆಂಗಳೂರು) ದೂರ: 43.03 ಸೆ.

10 ಕಿ.ಮೀ. ನಡಿಗೆ: ಸತ್ಯನಾರಾಯಣ (ಬೆಂಗಳೂರು)–1, ಡಿ.ದೇವರಾಜ್ (ದಕ್ಷಿಣ ಕನ್ನಡ)–2, ಎಂ.ಮಂಜುನಾಥ್ (ಮೈಸೂರು)–3 ಕಾಲ: 52 ನಿ. 30.6 ಸೆ.

ಮಹಿಳೆಯರ ವಿಭಾಗ: 100 ಮೀ. ಹರ್ಡಲ್ಸ್: ಪ್ರಿಯಾಂಕಾ (ಮೈಸೂರು)–1, ಎಚ್‌.ವಿ.ಪೂಜಾ (ಬೆಂಗಳೂರು)–2, ವಿ.ಎಸ್.ಶ್ರೀದೇವಿಕಾ (ದಕ್ಷಿಣ ಕನ್ನಡ)–3 ಕಾಲ: 14.2 ಸೆ.

400 ಮೀ.ಓಟ: ಎಂ.ಲಿಖಿತಾ (ಬೆಂಗಳೂರು ಗ್ರಾಮಾಂತರ)–1, ಸಿ.ಎಚ್‌.ವಿಶ್ವ (ದಕ್ಷಿಣ ಕನ್ನಡ)–2, ಸಿ.ಪಿ.ಭುವಿ (ಬೆಂಗಳೂರು ಗ್ರಾಮಾಂತರ)–3 ಕಾಲ: 55.7 ಸೆ.

10 ಸಾವಿರ ಮೀ. ಓಟ: ಕೆ.ಎಂ.ಅರ್ಚನಾ–1, ಚಿತ್ರಾ ದೇವಾಡಿಗ–2, ಕೆ.ಎಸ್‌.ಶಾಲಿನಿ–3 (ಎಲ್ಲರೂ ದಕ್ಷಿಣ ಕನ್ನಡ) ಕಾಲ: 39 ನಿ. 37 ಸೆ.

ಹೈಜಂಪ್: ಅಭಿನಯ ಶೆಟ್ಟಿ–1, ಎಸ್‌.ಬಿ.ಸುಪ್ರಿಯಾ–2, ಪಲ್ಲವಿ ಎಸ್‌.ಪಾಟೀಲ್–3 (ಎಲ್ಲರೂ ದಕ್ಷಿಣ ಕನ್ನಡ) ಎತ್ತರ: 1.75 ಮೀ.

ಜಾವೆಲಿನ್‌ ಥ್ರೋ: ಕರೀಷ್ಮಾ ಎಸ್‌.ಸನಿಲ್ (ಉಡುಪಿ)–1, ಪಾರ್ವತಿ ಎಂ.ನಾಯ್ಕ್ (ದಕ್ಷಿಣ ಕನ್ನಡ)–2, ಎಂ.ಕನ್ನಿಕಾ (ದಕ್ಷಿಣ ಕನ್ನಡ)–3 ದೂರ: 44.48 ಮೀ.

ಡಿಸ್ಕಸ್‌ ಥ್ರೋ: ಕಲಾವತಿ ಬಸಪ್ಪ (ಬೆಂಗಳೂರು ಗ್ರಾಮಾಂತರ)–1, ಪಿ.ಐಶ್ವರ್ಯಾ (ದಕ್ಷಿಣ ಕನ್ನಡ)–2, ಶ್ರುತಿ (ದಕ್ಷಿಣ ಕನ್ನಡ)–3 ದೂರ: 40 ಮೀ.

10 ಕಿ.ಮೀ. ನಡಿಗೆ: ಎಚ್‌.ಎಸ್‌.ಅರ್ಪಿತಾ–1, ಪಿ.ವಿ.ರೇಷ್ಮಾ–2, ಧನೂಷಾ ಶೆಟ್ಟಿ–3 (ಎಲ್ಲರೂ ದಕ್ಷಿಣ ಕನ್ನಡ) ಕಾಲ: 1 ಗಂ. 1 ನಿ.12 ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT