ಭಾನುವಾರ, ಏಪ್ರಿಲ್ 11, 2021
28 °C

ಒಲಿಂಪಿಕ್ಸ್‌ ಮುಕ್ತಾಯದವರೆಗೆ ಸಾಮಾಜಿಕ ಜಾಲತಾಣಗಳು ಸ್ಥಗಿತ: ಬಜರಂಗ್ ಪೂನಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ಕನಸು ಕಾಣುತ್ತಿರುವ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ತಮ್ಮ ಎಲ್ಲ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿಷ್ಕ್ರೀಯಗೊಳಿಸಿದ್ದಾರೆ.

 ’ಒಲಿಂಪಿಕ್ಸ್‌ ಮುಗಿಯುವವರೆಗೂ ನನ್ನ ಎಲ್ಲ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಸ್ಘಗಿತಗೊಳಿಸಿದ್ದೇನೆ. ನಿಮ್ಮೆಲ್ಲರ ಪ್ರೀತಿಯ ಹಾರೈಕೆಗಳು ನನ್ನೊಂದಿಗೆ ಇರುವ ಸದಾಶಯವಿದೆ. ಜೈಹಿಂದ್‘ ಎಂದು ಬಜರಂಗ್ ಟ್ವೀಟ್ ಮಾಡಿದ್ದಾರೆ.

2019ರಲ್ಲಿಯೇ ಅವರು ಒಲಿಂಪಿಕ್ಸ್‌ ನಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿದ್ದಾರೆ. ಈಚೆಗೆ ಅವರು ವಿಶೇಷ ತರಬೇತಿಗಾಗಿ ಅಮೆರಿಕಕ್ಕೆ ತೆರಳಿದ್ದರು. ಮಿಚಿಗನ್‌ನಲ್ಲಿ ತರಬೇತಿ ಮುಗಿಸಿ ಮರಳಿದ್ದಾರೆ.

ಇದೇ ಗುರುವಾರ ಇಟಲಿಯಲ್ಲಿ ನಡೆಯಲಿರುವ ಮಟಿಯೊ ಪೆಲಿಕೊನ್ ಕುಸ್ತಿ ಸರಣಿಯಲ್ಲಿ ಬಜರಂಗ್ ಕಣಕ್ಕಿಳಿಯಲಿದ್ದಾರೆ..

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು