ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌ ರ‍್ಯಾಂಕಿಂಗ್‌:: 370ನೇ ವಾರವೂ ಅಗ್ರಸ್ಥಾನದಲ್ಲಿ ಮುಂದುವರಿದ ಜೊಕೊವಿಚ್

ಎಟಿಪಿ ಟೆನಿಸ್‌ ರ‍್ಯಾಂಕಿಂಗ್‌: ಐದನೇ ಸ್ಥಾನಕ್ಕೆ ಕುಸಿದ ಸ್ಪೇನ್‌ನ ರಫೆಲ್ ನಡಾಲ್
Last Updated 16 ಮೇ 2022, 11:14 IST
ಅಕ್ಷರ ಗಾತ್ರ

ಪ್ಯಾರಿಸ್‌: ವಿಶ್ವ ಟೆನಿಸ್‌ನ ಪುರುಷರ ವಿಭಾಗದ ರ‍್ಯಾಂಕಿಂಗ್‌ನಲ್ಲಿ 370ನೇ ವಾರವೂ ಅಗ್ರಸ್ಥಾನದಲ್ಲಿ ಮುಂದುವರಿದಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ದಾಖಲೆಯನ್ನು ಇನ್ನಷ್ಟು ವಿಸ್ತರಿಸಿದ್ದಾರೆ. ಸ್ಪೇನ್‌ನ ರಫೆಲ್ ನಡಾಲ್ ಒಂದು ಸ್ಥಾನದ ಕುಸಿತದೊಂದಿಗೆ ಐದನೇ ಸ್ಥಾನಕ್ಕೆ ಇಳಿದಿದ್ದಾರೆ.

ಭಾನುವಾರ ಕೊನೆಗೊಂಡ ಇಟಾಲಿಯನ್ ಓಪನ್‌ ಟೂರ್ನಿಯಲ್ಲಿ ಗ್ರೀಸ್‌ನ ಸ್ಟೆಫನೊಸ್ ಸಿಟ್ಸಿಪಾಸ್ ಅವರನ್ನು ಮಣಿಸಿ ಜೊಕೊವಿಚ್ ಪ್ರಶಸ್ತಿ ಗೆದ್ದುಕೊಂಡಿದ್ದರು. ರಫೆಲ್ ನಡಾಲ್ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಡೆನಿಸ್ ಶಪೊವಲೊವ್‌ಗೆ ಮಣಿದಿದ್ದರು.

ಫೈನಲ್‌ನಲ್ಲಿ ಜಯ ಗಳಿಸುವುದರೊಂದಿಗೆ ಜೊಕೊವಿಚ್ ಆರನೇ ಬಾರಿ ಇಟಾಲಿಯನ್ ಓಪನ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಇದು, ರ‍್ಯಾಂಕಿಂಗ್ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲೇ ಉಳಿಯುವಂತೆ ಮಾಡಿತು.

ಅತಿಹೆಚ್ಚು ವಾರ ಸತತವಾಗಿ ಮೊದಲ ಸ್ಥಾನದಲ್ಲಿ ಮುಂದುವರಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರೋಜರ್ ಫೆಡರರ್ ಅವರಿಗೂ ಜೊಕೊವಿಚ್‌ಗೂ ನಡುವೆ ಈಗ 60 ವಾರಗಳ ಅಂತರವಿದೆ. ಪಟ್ಟಿಯಲ್ಲಿ ನಡಾಲ್ ಆರನೇ ಸ್ಥಾನದಲ್ಲಿದ್ದಾರೆ. ಅವರು 209 ವಾರ ಸತತವಾಗಿ ಅಗ್ರ ಸ್ಥಾನದಲ್ಲಿದ್ದರು.

ಮುಂದಿನ ಭಾನುವಾರ ಫ್ರೆಂಚ್ ಓಪನ್ ಟೂರ್ನಿ ಆರಂಭವಾಗಲಿದ್ದು ಅಗ್ರ ಶ್ರೇಯಾಂಕ ಜೊಕೊವಿಚ್ ಪಾಲಾಗುವುದು ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT