ಭಾನುವಾರ, ಸೆಪ್ಟೆಂಬರ್ 26, 2021
21 °C

ಬಾಕ್ಸಿಂಗ್ ತಂಡದ ವೈದ್ಯನಿಗೆ ಕೋವಿಡ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಬಾಕ್ಸಿಂಗ್‌ ತಂಡದ ವೈದ್ಯರೊಬ್ಬರಲ್ಲಿ ಕೋವಿಡ್‌–19 ಸೋಂಕು ಇರುವುದು ಸೋಮವಾರ ದೃಢಪಟ್ಟಿದೆ. ತರಬೇತಿಗಾಗಿ ಬಾಕ್ಸರ್‌ಗಳು ಸದ್ಯ ಪಟಿಯಾಲದಲ್ಲಿದ್ದು, ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ. ಆದರೆ ಈ ಬೆಳವಣಿಗೆಯಿಂದಾಗಿ ತರಬೇತಿ ಶಿಬಿರವನ್ನು ಮುಂದೂಡುವ ಆತಂಕ ಎದುರಾಗಿದೆ. 

ಸೋಂಕಿತ ವೈದ್ಯರೊಂದಿಗೆ ಒಂದೇ ಕ್ವಾರಂಟೈನ್‌ನಲ್ಲಿದ್ದ ವಿಶ್ವ ಬೆಳ್ಳಿ ಪದಕ ವಿಜೇತ ಅಮಿತ್‌ ಪಂಗಲ್‌ ಸೇರಿದಂತೆ 11 ಮಂದಿ ಬಾಕ್ಸರ್‌ಗಳು ಮರು ಪರೀಕ್ಷೆಗೆ ಒಳಗಾಗಲಿದ್ದಾರೆ.

’ಪಟಿಯಾಲದ ನ್ಯಾಷನಲ್‌ ಇನ್‌ಸ್ಟಿಟ್ಯೂಷನ್‌ ಆಫ್‌ ಸ್ಪೋರ್ಟ್ಸ್ (ಎನ್‌ಐಎಸ್‌) ಆವರಣದ ಹೊರಾಂಗಣದಲ್ಲಿರುವ ಕೇಂದ್ರದಲ್ಲಿ ವೈದ್ಯ ಅಮೋಲ್‌ ಪಾಟೀಲ್‌ ಕ್ವಾರಂಟೈನ್‌ನಲ್ಲಿದ್ದರು. ಮುಖ್ಯ ವಸತಿನಿಲಯ ಮತ್ತು ಕ್ರೀಡಾ ಅರೆನಾ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಮುನ್ನವೇ ಅವರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ ಸೋಂಕು ಪತ್ತೆಯಾಗಿದೆ‘ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಹೇಳಿದೆ.

’ಅಮೋಲ್‌ ಅವರನ್ನು ಸರ್ಕಾರಿ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುವುದು. ಅವರ ಸಂಪರ್ಕಕ್ಕೆ ಬಂದವರನ್ನು ಮಂಗಳವಾರ ತಪಾಸಣೆಗೆ ಒಳಪಡಿಸಲಾಗುವುದು. ಅಮೋಲ್‌ ಜೊತೆಗಿದ್ದ ಎಲ್ಲರ ಕ್ವಾರಂಟೈನ್‌ ಅವಧಿಯನ್ನು ಒಂದು ವಾರ ವಿಸ್ತರಿಸಲಾಗುವುದು. ಪ್ರೊಟೊಕಾಲ್‌ ಪ್ರಕಾರ ಕ್ವಾರಂಟೈನ್‌ ಕೇಂದ್ರಕ್ಕೆ ಕ್ರಿಮಿನಾಶಕ ಸಿಂಪಡಿಸಲಾಗಿದೆ‘ ಎಂದು ಸಾಯ್‌ ತಿಳಿಸಿದೆ.

’ಅಮೋಲ್‌ ಅವರಿಗೆ ಕೋವಿಡ್‌ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಅವರು ಶೀಘ್ರ ಗುಣಮುಖರಾಗಲಿದ್ದಾರೆ‘ ಎಂದು ಬಾಕ್ಸಿಂಗ್‌ ತಂಡದ ಮೂಲಗಳು ಹೇಳಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು