ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾನೀತಿ ಜಾರಿ ಮಾಡದ ಫೆಡರೇಷನ್‌ ಅನುದಾನ ನಿಲ್ಲಿಸಿ: ದೆಹಲಿ ಹೈಕೋರ್ಟ್

Last Updated 3 ಜೂನ್ 2022, 19:18 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಕ್ರೀಡಾ ನೀತಿಯನ್ನು ಜಾರಿಗೊಳಿಸದ ಕ್ರೀಡಾ ಫೆಡರೇಷನ್‌ಗಳಿಗೆ ಅನುದಾನ ಮತ್ತು ಬೆಂಬಲವನ್ನು ನೀಡಬಾರದು ಎಂದು ದೆಹಲಿ ಹೈಕೋರ್ಟ್ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಆದೇಶ ನೀಡಿದೆ.

‘ನಿಯಮಾವಳಿಯನ್ನು ಜಾರಿಗೊಳಿಸದಿರುವುದು ಕ್ರೀಡಾಭಿವೃದ್ಧಿ ಮತ್ತು ಕಲ್ಯಾಣವನ್ನು ನಿರಾಕರಿಸಿದಂತೆ. ಈ ರೀತಿ ಮಾಡಿದ ಹಲವು ಫೆಡರೇ ಷನ್‌ಗಳ ಬಗ್ಗೆ ದೂರುಗಳು ಬರುತ್ತಿವೆ. ಆಧ್ದರಿಂದ ಇನ್ನು ಮುಂದೆ ನಿಯಮಕ್ಕೆ ಬದ್ಧವಾಗದ ಸಂಸ್ಥೆಗೆ ಹಣ ನೀಡುವ ಪ್ರಶ್ನೆಯೇ ಇಲ್ಲ. ಈ ಫೆಡರೇಷನ್‌ಗಳ ಧೋರಣೆಯಿಂದ ಕಾನೂನು ಕಳೆಗುಂದಿದೆ’ ಎಂದು ವಿಚಾರಣೆ ನಡೆಸುತ್ತಿರುವ ನ್ಯಾಯ ಪೀಠದ ನ್ಯಾಯಮೂರ್ತಿ ನಜ್ಮಿ ವಝೀರಿ ಮತ್ತು ವಿಕಾಸ್ ಮಹಾಜನ್ ಹೇಳಿದ್ದಾರೆ.

ಮಾಸಾಂತ್ಯದಲ್ಲಿ ತಮ್ಮ ಫೆಡರೇಷನ್‌ಗಳಲ್ಲಿ ಹೊಸ ನೀತಿ ಜಾರಿಗೊಳಿಸುವ ಕೆಲಸವನ್ನು ಸಂಪೂರ್ಣ ಮಾಡಬೇಕು. ಈ ಅವಧಿಯಲ್ಲಿ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ನೆರವು ನೀಡಲು ಭಾರತ ಕ್ರೀಡಾ ಪ್ರಾಧಿಕಾರ ತನ್ನ ಕಾರ್ಯಕ್ಷಮತೆಯನ್ನು ವೃದ್ಧಿಸಿಕೊಳ್ಳಬೇಕು. ಕ್ರೀಡಾ ನೀತಿ ಜಾರಿಗೊಳಿಸದ ಫೆಡರೇಷನ್‌ಗಳನ್ನು ಅಮಾನತು ಮಾಡಬೇಕು ಎಂದೂ ನ್ಯಾಯಪೀಠ ಸೂಚಿಸಿದೆ.

15 ಫೆಡರೇಷನ್‌ಗಳು ಜಾರಿಗೊಳಿಸುವ ಹಾದಿಯಲ್ಲಿವೆ. 6 ಸಂಸ್ಥೆಗಳಿಗೆ ವಿನಾಯಿತಿ ನೀಡಲಾಗಿದೆ. ಐದು ಸಂಸ್ಥೆಗಳು ತಮ್ಮ ನಿಯಮಾವಳಿಯನ್ನು ಪರಿಷ್ಕರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT