ಬೆಂಗಳೂರು: ಡಿವೈಇಎಸ್ ಬೆಂಗಳೂರು ಮತ್ತು ಬೀಗಲ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡಗಳು ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಯೋಜಿಸಿದ್ದ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದುಕೊಂಡವು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ 18 ವರ್ಷದೊಳಗಿನವರ ಟೂರ್ನಿಯ ಬಾಲಕರ ವಿಭಾಗದ ಅಂತಿಮ ಲೀಗ್ ಪಂದ್ಯದಲ್ಲಿ ಡಿವೈಇಎಸ್ 31–19ರಲ್ಲಿ ಬೀಗಲ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವನ್ನು ಮಣಿಸಿತು. ಸೇತು 10 ಮತ್ತು ಮನೋಜ್ 5 ಪಾಯಿಂಟ್‌ಗಳನ್ನು ಗಳಿಸಿ ಡಿವೈಇಎಸ್ ಪರ ಮಿಂಚಿದರು. ಬೀಗಲ್ಸ್‌ಗಾಗಿ ಅಚಿಂತ್ಯ 7 ಮತ್ತು ಅಭಿಜಿತ್ 5 ಪಾಯಿಂಟ್ ಕಲೆ ಹಾಕಿದರು.

ಬಾಲಕಿಯರ ವಿಭಾಗದ ಫೈನಲ್ ಲೀಗ್ ಪಂದ್ಯದಲ್ಲಿ ಸಂಜನಾ (43 ಪಾಯಿಂಟ್ಸ್) ಅವರ ಅಮೋಘ ಆಟದ ನೆರವಿನಿಂದ ಬೀಗಲ್ಸ್ 81–63ರಲ್ಲಿ ಮೌಂಟ್ಸ್ ಬ್ಯಾಸ್ಕೆಟ್‌ಬಾಲ್ ತಂಡವನ್ನು ಮಣಿಸಿತು. ಬೀಗಲ್ಸ್ ಪರ ತ್ರಿಶಾ 16 ಪಾಯಿಂಟ್ ಗಳಿಸಿದರೆ ಮೌಂಟ್ಸ್ ತಂಡದ ಪಾವನಿ 29 ಮತ್ತು ನಕ್ಷತ್ರ 17 ಪಾಯಿಂಟ್ ಕಲೆ ಹಾಕಿದರು.

ಸೆಮಿಫೈನಲ್ ಲೀಗ್‌ನಲ್ಲಿ ಕೆ.ಎಸ್ ಹೆಗ್ಡೆ ತಂಡ 71–52ರಲ್ಲಿ ಜೆಎಸ್‌ಸಿಯನ್ನು ಮಣಿಸಿತು. ಬಿಂದುಶ್ರೀ (25 ಪಾಯಿಂಟ್ಸ್) ಮತ್ತು ಹರಿಣಿ (18 ಪಾಯಿಂಟ್ಸ್) ಕೆ.ಎಸ್.ಹೆಗ್ಡೆ ಪರ ಮಿಂಚಿದರೆ ಜೆಎಸ್‌ಸಿಗಾಗಿ ಅದಿತಿ 20 ಹಾಗೂ ಆದ್ಯ 13 ಪಾಯಿಂಟ್ ಗಳಿಸಿದರು.

ಬಾಲಕರ ವಿಭಾಗದಲ್ಲಿ ಮಂಗಳೂರು ಬಿ.ಸಿ, ಬೀಗಲ್ಸ್ ಬಿ.ಸಿ ಮತ್ತು ಬಿ.ಸಿ.ಬಿ.ಸಿ ತಂಡಗಳು ತಂಡಗಳು ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದವು. ಬಾಲಕಿಯರ ವಿಭಾಗದಲ್ಲಿ ಕೆ.ಎಸ್.ಹೆಗ್ಡೆ, ಮೌಂಟ್ಸ್ ಬಿ.ಸಿ ಮತ್ತು ಜೆಎಸ್‌ಸಿ ತಂಡಗಳು ಕ್ರಮವಾಗಿ ಎರಡರಿಂದ ಮೂರನೇ ಸ್ಥಾನ ಗಳಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.