ಶನಿವಾರ, ಡಿಸೆಂಬರ್ 7, 2019
25 °C

‘ವಿಶ್ವ ಚಾಂಪಿಯನ್‌ಷಿಪ್‌ಗೆ ಸಿದ್ಧತೆ ನಡೆದಿದೆ’

Published:
Updated:
ಮೇರಿ ಕೋಮ್‌

ನವದೆಹಲಿ: ‘ವಿಶ್ವ ಚಾಂಪಿಯನ್‌ಷಿಪ್‌ಗಾಗಿ ಈಗಾಗಲೇ ಸಿದ್ಧತೆ ನಡೆಸಿದ್ದೇನೆ’ ಎಂದು ಭಾರತದ ಬಾಕ್ಸರ್‌ ಮೇರಿ ಕೋಮ್‌ ಹೇಳಿದ್ದಾರೆ. 

ಭುಜದ ನೋವಿನಿಂದಾಗಿ  ಮೇರಿ ಕೋಮ್‌ ಅವರು ಮುಂದಿನ ತಿಂಗಳು ನಡೆಯುವ ಏಷ್ಯನ್‌ ಕ್ರೀಡಾಕೂಟದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ನವೆಂಬರ್‌ ತಿಂಗಳಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ನಡೆಯಲಿದೆ. 

‘ಗಾಯದಿಂದ ನಿಧಾನವಾಗಿ ಚೇತರಿಕೆಯಾಗುತ್ತಿದ್ದೇನೆ. ಅಭ್ಯಾಸ ಆರಂಭಿಸಿದ್ದೇನೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸವಿದೆ. ಆದರೆ, ಈ ಮಧ್ಯೆ ಮತ್ತೆ ಗಾಯಗೊಳ್ಳದಂತೆ ಎಚ್ಚರಿಕೆ ವಹಿಸಬೇಕಿದೆ’ ಎಂದು ಮೇರಿ ಹೇಳಿದ್ದಾರೆ. 

‘ದೀರ್ಘ ಸಮಯದ ಅಭ್ಯಾಸ ಮಾಡುವುದನ್ನು ಬಿಟ್ಟಿದ್ದೇನೆ. ಏಳು ವರ್ಷಗಳ ಹಿಂದೆ ದಿನಕ್ಕೆ 2–3 ಗಂಟೆಗಳ ಕಾಲ ತಾಲೀಮು ನಡೆಸುತ್ತಿದ್ದೆ. ಆದರೆ, ಈಗ ಅದರ ಅಗತ್ಯವಿಲ್ಲ. ಸಂಪೂರ್ಣ ಫಿಟ್‌ ಆಗಿದ್ದರೆ ಮಾತ್ರ ಕ್ರೀಡಾಕೂಟದಲ್ಲಿ ಸ್ಪರ್ಧಿಸಬಹುದು’ ಎಂದು ಅವರು ತಿಳಿಸಿದ್ದಾರೆ. 

‘ಯುವ ಬಾಕ್ಸರ್‌ಗಳು ಪರಿಶ್ರಮ ಪಡುತ್ತಿದ್ದಾರೆ. ಅವರೆಲ್ಲ ಮುಂದೆ ನಡೆಯುವ ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆಲ್ಲಬೇಕು. ಇದರಿಂದ ಅವರ ವಿಶ್ವಾಸ ಇಮ್ಮಡಿಯಾಗುತ್ತದೆ. ಯುವ ಬಾಕ್ಸರ್‌ಗಳಿಗೆ ನೆರವಾಗುವ ಹಲವು ಯೋಜನೆಗಳನ್ನು ಬಾಕ್ಸಿಂಗ್‌ ಫೆಡರೇಷನ್‌ ಆರಂಭಿಸಿದೆ’ ಎಂದೂ ಅವರು ತಿಳಿಸಿದ್ದಾರೆ. 

ಮೇರಿ ಕೋಮ್‌ ಅವರು ಐದು ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕಗಳನ್ನು ಗೆದ್ದಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು