ಶನಿವಾರ, ಅಕ್ಟೋಬರ್ 23, 2021
25 °C
ವಿಶ್ವ ಟೇಬಲ್ ಟೆನಿಸ್ ಕಂಟೆಂಡರ್‌ ಟೂರ್ನಿ: ಬೆಳ್ಳಿ ಗೆದ್ದ ಕರ್ನಾಟಕದ ಯಶಸ್ವಿನಿ

ವಿಶ್ವ ಟೇಬಲ್ ಟೆನಿಸ್ ಕಂಟೆಂಡರ್‌ ಟೂರ್ನಿ: ಭಾರತದ ಆಟಗಾರ್ತಿಯರ ಪದಕಗಳ ಬೇಟೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಆಟಗಾರ್ತಿಯರು ಟ್ಯೂನಿಷಿಯಾದ ಟ್ಯುನಿಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್‌ ಟೆನಿಸ್‌ ಕಂಟೆಂಡರ್‌ ಟೂರ್ನಿಯನ್ನು ಚಿನ್ನದ ಪದಕಗಳನ್ನು ಬಾಚಿಕೊಂಡರು.

ಟೂರ್ನಿಯಲ್ಲಿ ಲಭ್ಯವಿದ್ದ ಎಲ್ಲ ಚಿನ್ನದ ಪದಕಗಳು ಅಲ್ಲದೆ ಕೆಲವು ಬೆಳ್ಳಿ ಮತ್ತು ಕಂಚಿನ ಪದಕಗಳೂ ಭಾರತದವರ ಪಾಲಾದವು.

19 ವರ್ಷದೊಳಗಿನವರ ವಿಭಾಗದಲ್ಲಿ ಸ್ವಸ್ತಿಕಾ ಘೋಷ್‌, ಯಶಸ್ವಿನಿ ಘೋರ್ಪಡೆ (17 ವರ್ಷದೊಳಗಿನವರು), ಸುಹಾನಾ ಸೈನಿ (15 ವರ್ಷದೊಳಗಿನವರು), ಹಸ್ನಿನಿ ರಾಜನ್‌ (13 ವರ್ಷದೊಳಗಿನವರು) ಮತ್ತು ಧಾನಿ ಜೈನ್‌ (11 ವರ್ಷದೊಳಗಿನವರು) ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು.

ಭಾರತದ ಸ್ಪರ್ಧಿಗಳೇ ಇದ್ದ 19 ವರ್ಷದೊಳಗಿನವರ ಫೈನಲ್‌ನಲ್ಲಿ ಸ್ವಸ್ತಿಕಾ ಘೋಷ್‌ 6-11 11-6 6-11 11-6 11-8ರಿಂದ ಕರ್ನಾಟಕದ ಯಶಸ್ವಿನಿ ಘೋರ್ಪಡೆ ಅವರನ್ನು ಮಣಿಸಿದರು. ಇದಕ್ಕೂ ಮೊದಲು ಯಶಸ್ವಿನಿ 17 ವರ್ಷದೊಳಗಿನವರ ವಿಭಾಗದಲ್ಲಿ ಈಜಿಪ್ಟ್‌ನ ಫರೀದಾ ಬಾದವಿ ಎದುರು 11-6 14-12 11-7ರಿಂದ ಗೆದ್ದು ಅಗ್ರಸ್ಥಾನ ಗಳಿಸಿದ್ದರು.

15 ವರ್ಷದೊಳಗಿನವರ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸುಹಾನಾ 11–3, 9–11, 11–8, 9–11, 11–7ರಿಂದ ಭಾರತದವರೇ ಆದ ಪ್ರೀತಾ ವರ್ತಿಕರ್ ಸವಾಲು ಮೀರಿದರು. ಸುಹಾನಾ ಅವರಿಗೆ ಇದು  ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಎರಡನೇ ಚಿನ್ನ. ಸ್ಲೊವೇನಿಯಾ ನಿವಾಸಿಯಾಗಿದ್ದ ವೇಳೆ ಅವರು ಟೂರ್ನಿಯೊಂದರಲ್ಲಿ ಅಗ್ರಸ್ಥಾನ ಗಳಿಸಿದ್ದರು.

ಹಸ್ನಿನಿ ರಾಜನ್‌ 13 ವರ್ಷದೊಳಗಿನವರ ವಿಭಾಗದ ಫೈನಲ್‌ನಲ್ಲಿ ಭಾರತದವರೇ ಆದ ಪ್ರೀಶಾ ಗೋಯಲ್ ಎದುರು 11-5 11-8 11-8ರಿಂದ ಜಯಭೇರಿ ಮೊಳಗಿಸಿದರು. ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದ 11 ವರ್ಷದೊಳಗಿನವರ ವಿಭಾಗದಲ್ಲಿ ಧಾನಿ ಜೈನ್‌ 11-4 11-6 9-11 10-12 11-7ರಿಂದ ಭಾರತದ ಅನನ್ಯಾ ಮುರಳೀಧರನ್ ಎದುರು ಗೆದ್ದು ಸಂಭ್ರಮಿಸಿದರು.

ಇದಕ್ಕೂ ಮೊದಲು ನಡೆದ 19 ವರ್ಷದೊಳಗಿನವರ ಸೆಮಿಫೈನಲ್ ಪಂದ್ಯಗಳಲ್ಲಿ ಯಶಸ್ವಿನಿ ಅವರು ನಿತ್ಯಾಶ್ರೀ ಮಣಿ ಎದುರು 9-11 11-4 11-8 11-5ರಿಂದ, ಸ್ವಸ್ತಿಕಾ 11-4 10-12 11-8 11-7ರಿಂದ ಲಕ್ಷಿತಾ ನಾರಂಗ್ ಎದುರು ಜಯಿಸಿದ್ದರು. ನಿತ್ಯಶ್ರೀ ಹಾಗೂ ಲಕ್ಷಿತಾ ಕಂಚಿನ ಪದಕ ಗಳಿಸಿದರು.

15 ವರ್ಷದೊಳಗಿನವರ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ಸಯಲಿ ವಾಣಿ 7-11 10-12 11-13ರಿಂದ ಸುಹಾನಾ ಎದುರು ಸೋತು ಕಂಚು ತಮ್ಮದಾಗಿಸಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು