ಹಾಕಿ ಕೋಚ್‌ ಹರೇಂದ್ರ ಸಿಂಗ್‌ಗೆ ಗೇಟ್‌ಪಾಸ್‌

7

ಹಾಕಿ ಕೋಚ್‌ ಹರೇಂದ್ರ ಸಿಂಗ್‌ಗೆ ಗೇಟ್‌ಪಾಸ್‌

Published:
Updated:
Prajavani

ನವದೆಹಲಿ: ಭಾರತ ಪುರುಷರ ಹಾಕಿ ತಂಡದ ಕೋಚ್‌ ಹರೇಂದ್ರ ಸಿಂಗ್‌ ಅವರನ್ನು ಬುಧವಾರ ವಜಾ ಮಾಡಲಾಗಿದೆ. ಕಳೆದ ವರ್ಷ ತಂಡ ಕಳಪೆ ಸಾಮರ್ಥ್ಯ ತೋರಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

ಅವರಿಗೆ ಜೂನಿಯರ್ ತಂಡದ ಜವಾಬ್ದಾರಿ ವಹಿಸಲಾಗಿದೆ. ಹರೇಂದ್ರ ಅವರನ್ನು ಕಳೆದ ಮೇ ತಿಂಗಳಲ್ಲಿ ಕೋಚ್ ಆಗಿ ನೇಮಕ ಮಾಡಲಾಗಿತ್ತು.

‘ಭಾರತ ಹಾಕಿಗೆ 2018 ಕಳಪೆ ಸಾಧನೆಯ ವರ್ಷವಾಗಿತ್ತು. ಕಳೆದ ವರ್ಷ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಆದ್ದರಿಂದ ಈಗ ಜೂನಿಯರ್‌ ತಂಡದತ್ತ ಗಮನ ಹರಿಸಲಾಗುತ್ತಿದೆ’ ಎಂದು ಹಾಕಿ ಇಂಡಿಯಾ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !