ಭಾನುವಾರ, ಫೆಬ್ರವರಿ 28, 2021
29 °C
ಪಂಬಾಜ್‌ ರಾಯಲ್ಸ್ ಎದುರು 6–3ರಿಂದ ಗೆಲುವು

ಪ್ರೊ ಕುಸ್ತಿ ಲೀಗ್‌: ಹರಿಯಾಣ ಹ್ಯಾಮರ್ಸ್‌ ಚಾಂಪಿಯನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗ್ರೇಟರ್ ನೋಯ್ಡ: ಸತತ ಎರಡನೇ ವರ್ಷ ಫೈನಲ್‌ ಪ್ರವೇಶಿಸಿದ ಹರಿಯಾಣ ಹ್ಯಾಮರ್ಸ್‌ ತಂಡ ಪ್ರೊ ಕುಸ್ತಿ ಲೀಗ್‌ನ ಚೊಚ್ಚಲ ಪ್ರಶಸ್ತಿ ಗೆದ್ದಿತು. ಗುರುವಾರ ರಾತ್ರಿ ಇಲ್ಲಿ ನಡೆದ ನಾಲ್ಕನೇ ಆವೃತ್ತಿಯ ಫೈನಲ್ ಹಣಾಹಣಿಯಲ್ಲಿ ಹ್ಯಾಮರ್ಸ್‌ 6–3ರಿಂದ ಪಂಜಾಬ್ ರಾಯಲ್ಸ್ ಎದುರು ಗೆದ್ದಿತು.

ಹಾಲಿ ಚಾಂಪಿಯನ್‌ ವಿರುದ್ಧದ ಪಂದ್ಯದಲ್ಲಿ ಹರಿಯಾಣದ ಅಲೆಕ್ಸಾಂಡರ್ ಕೊಟ್ಸ್ಯಾನವಸ್ಕಿ, ಅಲಿ ಶಬನೊವ್‌, ಕಿರಣ್‌, ರವಿ ಕುಮಾರ್ ಮತ್ತು ಅನಸ್ತೇಸಿಯಾ ನಿಚಿತ ಭಾರಿ ಪಟ್ಟುಗಳನ್ನು ಹಾಕಿದರು.

ಉಕ್ರೇನ್‌ನ ಅಲೆಕ್ಸಾಂಡರ್‌ 125 ಕೆಜಿ ವಿಭಾಗದಲ್ಲಿ ಕೆನಡಾದ ಕೋರಿ ಜಾರ್ವಿಸ್‌ ಎದುರು 3–0ಯಿಂದ ಗೆದ್ದು ಹರಿಯಾಣಕ್ಕೆ ಮುನ್ನಡೆ ಒದಗಿಸಿದರು. ನಂತರ ಶಬನೊವ್‌ 4–3ರಿಂದ ಡಾಟೊ ಮರ್ಸಗಿಶಿವ್ಲಿ ಎದುರು ಗೆದ್ದು ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.

ಕಿರಣ್ ಕುಮಾರ್‌ ಮಹಿಳೆಯರ 76 ಕೆಜಿ ವಿಭಾಗದಲ್ಲಿ 3–1ರಿಂದ ಸಿಂಥಿಯಾ ವೆಸ್ಕಾನ್ ಎದುರು ಗೆಲ್ಲುವುದರೊಂದಿಗೆ ತಂಡದ ಮುನ್ನಡೆ ಇನ್ನಷ್ಟು ಹೆಚ್ಚಿತು. ನಿತಿನ್ ರಾಟಿ ವಿರುದ್ಧ ರವಿ ಗೆಲುವಿನೊಂದಿಗೆ ತಂಡ 4–0 ಮುನ್ನಡೆ ಗಳಿಸಿತು. ನಂತರ ಅನಸ್ತೇಸಿಯಾ ಮತ್ತು ತತ್ಯಾನ ಗೆದ್ದು ಸಂಭ್ರಮಿಸಿದರು.

ಪ್ರವೀಣ್ ರಾಣ ವಿರುದ್ಧ 5–2ರಿಂದ ಗೆದ್ದ ಅಮಿತ್ ಧನಕಾರ್ ಮತ್ತು ಸೀಮಾ ಎದುರು 10–5ರಿಂದ ಗೆದ್ದ ಅಂಜು ಪಂಜಾಬ್ ತಂಡಕ್ಕೆ ಸಮಾಧಾನ ತಂದುಕೊಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು