ಹಾಕಿ: ಪುಚ್ಚಿಮಾಡಕ್ಕೆ ಗೆಲುವು

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

ಹಾಕಿ: ಪುಚ್ಚಿಮಾಡಕ್ಕೆ ಗೆಲುವು

Published:
Updated:

ವಿರಾಜಪೇಟೆ: ಮೇಕೇರಿರ, ಮಂಡೇಟಿರ, ಮುಕ್ಕಾಟಿರ (ಭೇತ್ರಿ), ಪುಚ್ಚಿಮಾಡ, ಕುಪ್ಪಂಡ ತಂಡಗಳು ಸಮೀಪದ ಕಾಕೋಟುಪರಂಬು ಮೈದಾನದಲ್ಲಿ ನಡೆಯುತ್ತಿರುವ ಕೊಡವ ಹಾಕಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಗೆಲುವು ಸಾಧಿಸಿವೆ.

ಹಾಕಿ ಕೂರ್ಗ್‌ ಆಶ್ರಯದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೇಕೇರಿರ ತಂಡವು 2–0 ಗೋಲುಗಳಿಂದ ಮಾಪಂಗಡ ತಂಡವನ್ನು ಮಣಿಸಿ, ಮುಂದಿನ ಹಂತ ಪ್ರವೇಶಿಸಿತು. ಮೇಕೇರಿರ ಪರ ನರ್ತನ್‌, ಅಭಿನವ್ ತಲಾ ಒಂದೊಂದು ಗೋಲು ಗಳಿಸಿದರು.

ಮಂಡೇಟಿರ ತಂಡವು 4–0 ಗೋಲುಗಳಿಂದ ಮಂಡೇಡ ತಂಡವನ್ನು ಮಣಿಸಿತು. ಮುಕ್ಕಾಟೀರ (ಭೇತ್ರಿ) ತಂಡವು 5–1 ಗೋಲುಗಳಿಂದ ಮಾಣಿರ ವಿರುದ್ಧ ಗೆಲುವಿನ ನಗೆ ಬೀರಿತು.

ಪುಚ್ಚಿಮಾಡ ತಂಡವು 8–2 ಗೋಲುಗಳಿಂದ ಬೆರೇರ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. ಪುಚ್ಚಿಮಾಡದ ಯಶ್ವಿನ್ 4, ಮಿತ್ರ 2, ಭುವನ್ ಮತ್ತು ಮಾಚಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು. ಕುಪ್ಪಂಡವು 7-0 ಗೋಲುಗಳಿಂದ ಬುಟ್ಟಿಯಂಡ ತಂಡವನ್ನು ಪರಾಭವಗೊಳಿಸಿತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !