ಗುರುವಾರ , ಏಪ್ರಿಲ್ 9, 2020
19 °C
ಕೊರೊನಾ ಸೋಂಕು ಭೀತಿ: ಹಾಕಿ ಇಂಡಿಯಾ ನಿರ್ಧಾರ

ಜೂನಿಯರ್‌, ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌ ಮುಂದಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಏಪ್ರಿಲ್‌ 10ರಿಂದ ನಿಗದಿಯಾಗಿದ್ದ ಎಲ್ಲ ರಾಷ್ಟ್ರೀಯ ಜೂನಿಯರ್‌ ಹಾಗೂ ಸಬ್‌ಜೂನಿಯರ್‌ ಚಾಂಪಿಯನ್‌ಷಿಪ್‌ಗಳನ್ನು ಕೊರೊನಾ ಸೋಂಕು ಹಬ್ಬುವ ಭೀತಿಯಿಂದ ಹಾಕಿ ಇಂಡಿಯಾ ಮುಂದೂಡಿದೆ. ಪರಿಸ್ಥಿತಿ ಸುಧಾರಿಸಿದರೆ ಮುಂದಿನ ತಿಂಗಳ ಅಂತ್ಯದಲ್ಲಿ ಈ ಟೂರ್ನಿಗಳನ್ನು ಆಯೋಜಿಸುವ ವಿಶ್ವಾಸವನ್ನು ಹೊಂದಿದೆ.

ದೇಶದಲ್ಲಿ ಕೊರೊನಾ ವೈರಾಣು ಸೋಂಕಿನಿಂದ ಈಗಾಗಲೇ ಇಬ್ಬರು ಸಾವಿಗೀಡಾಗಿದ್ದಾರೆ‌. 100ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಾಕಿ ಇಂಡಿಯಾದ ಕಾರ್ಯಕಾರಿ ಮಂಡಳಿ ಚಾಂಪಿಯನ್‌ಷಿಪ್‌ಗಳನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿದೆ.

‘ಆಟಗಾರರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ. ಚಾಂಪಿಯನ್‌ಷಿಪ್‌ ನಡೆಯುವ ಪರಿಷ್ಕೃತ ದಿನಾಂಕಗಳನ್ನೂ ಪ್ರಕಟಿಸಲಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಯಾವುದೇ ಸನ್ನಿವೇಶ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮೊಹಮ್ಮದ್‌ ಮುಷ್ತಾಕ್‌ ಅಹ್ಮದ್ ಹೇಳಿದ್ದಾರೆ.

ಹಾಕಿ ಇಂಡಿಯಾ ಟೂರ್ನಿಗಳ ಪಟ್ಟಿ

ಟೂರ್ನಿ; ಸ್ಥಳ; ನಿಗದಿಯಾಗಿದ್ದ ದಿನ; ಮುಂದೂಡಿದ ದಿನ

ಜೂನಿಯರ್‌ ಮಹಿಳಾ(ಬಿ ಡಿವಿಷನ್‌); ರಾಂಚಿ; ಏಪ್ರಿಲ್‌ 10–20; ಏಪ್ರಿಲ್‌ 29–ಮೇ 9

ಜೂನಿಯರ್‌ ಪುರುಷ(ಬಿ ಡಿವಿಷನ್‌); ಚೆನ್ನೈ; ಏಪ್ರಿಲ್‌ 15–26; ಮೇ14–21

ಸಬ್‌ ಜೂನಿಯರ್‌ ಮಹಿಳಾ(ಬಿ ಡಿವಿಷನ್‌); ಹಿಸ್ಸಾರ್‌; ಏಪ್ರಿಲ್‌ 13–24; ಮೇ 3–14

ಜೂನಿಯರ್‌ ಪುರುಷ(ಎ ಡಿವಿಷನ್‌); ಚೆನ್ನೈ; ಏಪ್ರಿಲ್‌ 10–17; ಮೇ19–30

ಜೂನಿಯರ್‌ ಮಹಿಳಾ(ಎ ಡಿವಿಷನ್‌); ರಾಂಚಿ; ಏಪ್ರಿಲ್‌ 18–28; ಮೇ 7–17

ಸಬ್‌ಜೂನಿಯರ್‌ ಮಹಿಳಾ(ಎ ಡಿವಿಷನ್‌); ಹಿಸ್ಸಾರ್‌; ಏಪ್ರಿಲ್‌ 22–ಮೇ 3; ಮೇ 12–23

ಸಬ್‌ಜೂನಿಯರ್‌ ಪುರುಷ(ಬಿ ಡಿವಿಷನ್‌); ಇಂಫಾಲ್‌; ಏಪ್ರಿಲ್‌ 26–ಮೇ 3; ಮೇ 28–ಜೂನ್‌ 4

ಸಬ್‌ಜೂನಿಯರ್‌ ಪುರುಷ(ಎ ಡಿವಿಷನ್‌); ಇಂಫಾಲ್‌; ಮೇ 7–17; ಜೂನ್‌ 3–13

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು