ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ತಂಡಗಳ ಹೊರಾಂಗಣ ಅಭ್ಯಾಸ ಆರಂಭ

Last Updated 3 ಜೂನ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿಯ ಭಾರತೀಯ ಕ್ರೀಡಾ ಪ್ರಾಧಿಕಾರದ ವಸತಿ ನಿಲಯದಲ್ಲಿರುವ ಭಾರತ ಹಾಕಿ ತಂಡಗಳು ಹೊರಾಂಗಣ ಅಭ್ಯಾಸವನ್ನು ಸೋಮವಾರದಿಂದ ಆರಂಭಿಸಿವೆ.

ಸುಮಾರು ಎರಡು ತಿಂಗಳುಗಳಿಂದ ಲಾಕ್‌ಡೌನ್‌ ಕಾರಣಕ್ಕೆ ‘ಗೃಹಬಂಧನ’ದಲ್ಲಿದ್ದ ತಂಡಗಳ ಆಟಗಾರರು ಮತ್ತೆ ಕ್ರೀಡಾಂಗಣಕ್ಕೆ ಮರಳಿದ್ದಾರೆ.

‘ಸೀನಿಯರ್ ಪುರುಷ ಮತ್ತು ಮಹಿಳೆಯರ ಸಂಭವನೀಯ ತಂಡಗಳು ಬೆಂಗಳೂರು ಸಾಯ್‌ನಲ್ಲಿ ಅಭ್ಯಾಸ ಆರಂಭಿಸಿವೆ. ಕ್ರೀಡಾ ಇಲಾಖೆಯ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಎರಡೂ ತಂಡಗಳ ಆಟಗಾರರು ನಿಯಮಗಳನ್ನು ಶಿಸ್ತಿನಿಂದ ಪಾಲಿಸುತ್ತಿವೆ. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆಯೆಂದು ಸಾಯ್ ತಿಳಿಸಿದೆ. ಈ ಕುರಿತು ಎಲ್ಲ ಆಟಗಾರರಿಗೂ ತಿಳಿವಳಿಕೆ ನೀಡಲಾಗಿದೆ’ ಎಂದು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

‘ಎರಡು ತಿಂಗಳುಗಳ ನಂತರ ಆಟಗಾರರು ಅಂಕಣಕ್ಕೆ ಮರಳಿದ್ದಾರೆ. ಆದ್ದರಿಂದ ಕಡಿಮೆ ಅವಧಿಯ ತಾಲೀಮನ್ನು ನಿಗದಿಪಡಿಸಲಾಗಿದೆ. ಪ್ರಾಥಮಿಕ ಹಂತದ ಕೌಶಲ ಮತ್ತು ವ್ಯಾಯಾಮಗಳಿಗೆ ಸೀಮಿತಗೊಳಿಸಲಾಗಿದೆ. ತರಬೇತಿ ಸಿಬ್ಬಂದಿಯು ಸಮಗ್ರ ಅಧ್ಯಯನ ಮಾಡಿದ ನಂತರ ತರಬೇತಿ ರೂಪುರೇಷೆಯನ್ನು ಸಿದ್ಧಪಡಿಸಿದೆ. ಆಟಗಾರರು ಮರಳಿ ಲಯಕ್ಕೆ ಬರಲು ಬಹಳಷ್ಟು ಸಮಯವನ್ನು ನೀಡಲಾಗುತ್ತಿದೆ’’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT