ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಅಂಗಣದಲ್ಲಿ ತಂಡಗಳ ಹೊಡೆದಾಟ

Last Updated 25 ನವೆಂಬರ್ 2019, 18:26 IST
ಅಕ್ಷರ ಗಾತ್ರ

ನವದೆಹಲಿ : ರಾಷ್ಟ್ರಮಟ್ಟದ ಜವಾಹರಲಾಲ್ ನೆಹರು ಹಾಕಿ ಟೂರ್ನಿಯ ಫೈನಲ್‌ ಪಂದ್ಯದ ಸಂದರ್ಭದಲ್ಲಿ ಅಂಗಣದಲ್ಲೇ ಹೊಡೆದಾಡಿಕೊಂಡ ಪಂಜಾಬ್ ಪೊಲೀಸ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ ತಂಡಗಳ ಮೇಲೆ ನಿಷೇಧ ಹೇರಲಾಗಿದೆ.

ಸೋಮವಾರ ನಡೆದ ಪಂದ್ಯದ ಮೂರನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು 3–3 ಗೋಲುಗಳ ಸಮಬಲ ಸಾಧಿಸಿದ್ದವು. ಪಂಜಾಬ್‌ ಪೊಲೀಸ್‌ ತಂಡದ ಆವರಣಕ್ಕೆ ಪೊಲೀಸ್ ತಂಡದ ಆಕ್ರಮಣ ವಿಭಾಗದವರು ನುಗ್ಗಿದ್ದರು. ಈ ಸಂದರ್ಭದಲ್ಲಿ ಉಭಯ ತಂಡದ ಆಟಗಾರರು ಸ್ಟಿಕ್‌ಗಳಲ್ಲಿ ಹೊಡೆದಾಡಿಕೊಂಡರು. ಟೂರ್ನಿಯ ಆಯೋಜಕರು ಮಧ್ಯಪ್ರವೇಶಿಸಿ ಗಲಾಟೆ ನಿಯಂತ್ರಿಸಿದರು. ರೆಫರಿ, ಎರಡೂ ತಂಡಗಳ ತಲಾ ಮೂವರು ಆಟಗಾರರಿಗೆ ರೆಡ್ ಕಾರ್ಡ್ ತೋರಿಸಿ ಹೊರಗೆ ಅಟ್ಟಿದರು. ಪಂಜಾಬ್ ಪೊಲೀಸ್‌ ತಂಡದ ಮ್ಯಾನೇಜರ್‌ಗೂ ರೆಡ್ ಕಾರ್ಡ್ ತೋರಿಸಲಾಯಿತು.

ನಂತರ ಪಂದ್ಯವನ್ನು ಮುಂದುವರಿಸಲಾಯಿತು. ಪಂಜಾಬ್ ನ್ಯಾಷನಲ್ ಬ್ಯಾಂಕ್‌ ತಂಡ 6–3ರಲ್ಲಿ ಗೆದ್ದು ಪ್ರಶಸ್ತಿ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT