ಮಂಗಳವಾರ, ಆಗಸ್ಟ್ 16, 2022
29 °C
ಐಎನ್‌ಬಿಎಲ್‌ 3x3 ಬ್ಯಾಸ್ಕೆಟ್‌ಬಾಲ್ ಲೀಗ್‌

ಹೈದರಾಬಾದ್, ಲೂಧಿಯಾನ ತಂಡಗಳಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಲೂಧಿಯಾನ ಮತ್ತು ಹೈದರಾಬಾದ್‌ ತಂಡಗಳು ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಆಯೋಜಿಸಿರುವ ಐಎನ್‌ಬಿಎಲ್‌ 3x3 ಬ್ಯಾಸ್ಕೆಟ್‌ಬಾಲ್ ಲೀಗ್‌ನ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದವು.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಲೂಧಿಯಾನ 17–10ರಿಂದ ಮುಂಬೈ ತಂಡಕ್ಕೆ ಸೋಲುಣಿಸಿತು.

ಮಹಿಳೆಯರ ವಿಭಾಗದಲ್ಲಿ ಹೈದರಾಬಾದ್‌ 21–18ರಿಂದ ಕೋಲ್ಕತ್ತ ತಂಡವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

18 ವರ್ಷದೊಳಗಿನವರ ಪುರುಷರ ವಿಭಾಗದಲ್ಲಿ ಜೈಪುರ ತಂಡವು ಅಗ್ರಸ್ಥಾನ ಗಳಿಸಿತು. ಫೈನಲ್‌ನಲ್ಲಿ ಈ ತಂಡವು 21–10ರಿಂದ ಚಂಡೀಗಡ ತಂಡವನ್ನು ಸೋಲಿಸಿತು.

ಇಂದೋರ್ ತಂಡವು 18 ವರ್ಷದೊಳಗಿನ ಮಹಿಳೆಯರ ವಿಭಾಗದ ಫೈನಲ್‌ನಲ್ಲಿ 14–9ರಿಂದ ಬಿಲಾಯಿ ತಂಡವನ್ನು ಮಣಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು