ಮಂಗಳವಾರ, ಮಾರ್ಚ್ 31, 2020
19 °C
ಮೂರು ರಾಷ್ಟ್ರಗಳ ಮಹಿಳಾ ಹಾಕಿ ಟೂರ್ನಿ

ಹಾಕಿ ತಂಡಕ್ಕೆ ಸುಮನ್‌ ನಾಯಕಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮೂರು ರಾಷ್ಟ್ರಗಳ ನಡುವೆ ನಡೆಯುವ ಮಹಿಳಾ ಹಾಕಿ ಟೂರ್ನಿಗೆ 18 ಸದಸ್ಯರ ಭಾರತ ಜೂನಿಯರ್‌ ಹಾಕಿ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ.

ತಂಡದ ನಾಯಕತ್ವವನ್ನು ಸುಮನ್‌ ದೇವಿ ತೌಡಮ್‌ ವಹಿಸಿಕೊಂಡಿದ್ದಾರೆ. ಡಿಸೆಂಬರ್‌ 3ರಿಂದ 8ರವರೆಗೆ ಆಸ್ಟ್ರೇಲಿಯಾದ ಕೆನ್‌ಬೆರಾದಲ್ಲಿ ಟೂರ್ನಿ ಆಯೋಜನೆಯಾಗಿದೆ.

ಭಾರತ ಅಲ್ಲದೆ ಆತಿಥೇಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳು ಟೂರ್ನಿಯಲ್ಲಿ ಆಡಲಿವೆ. ಡಿ.4ರಂದು ಭಾರತ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ.

ಇಷಿಕಾ ಚೌಧರಿ ಭಾರತ ತಂಡದ ಉಪನಾಯಕಿಯ ಜವಾಬ್ದಾರಿ ನಿಭಾಯಿಸಲಿರುವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು