ಬುಧವಾರ, ಜುಲೈ 28, 2021
29 °C

ಸ್ಕ್ವಾಷ್‌ ರ್ಯಾಂಕಿಂಗ್‌: ಜೋಷ್ನಾ ಚಿಣ್ಣಪ್ಪಗೆ ಬಡ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಸ್ಕ್ವಾಷ್ ಆಟಗಾರ್ತಿ ಜೋಷ್ನಾ ಚಿಣ್ಣಪ್ಪ ಅವರಿಗೆ ಪಿಎಸ್‌ಎ ವಿಶ್ವ ರ್ಯಾಂಕಿಂಗ್‌ ಪಟ್ಟಿಯ ಅಗ್ರ ಹತ್ತರಲ್ಲಿ ಸ್ಥಾನ ಲಭಿಸಿದೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಈಜಿಪ್ತ್‌ ದೇಶದ ರನೀಮ್ ಎಲ್ ವೆಲಿಲಿ ಅವರು ಈಚೆಗೆ ನಿವೃತ್ತಿ ಘೋಷಿಸಿದ್ದರು. ಅದರಿಂದಾಗಿ ಜೋಷ್ನಾ ಅವರಿಗೆ ಹತ್ತನೇ ಸ್ಥಾನ ಲಭಿಸಿದೆ. ತಮ್ಮ ವೃತ್ತಿ ಜೀವನದಲ್ಲಿ ಅವರು 2016ರಲ್ಲಿ ಇಂತಹ ಸಾಧನೆ ಮಾಡಿದ್ದರು. ಇದು ಎರಡನೇ ಸಲವಾಗಿದೆ.  ಭಾರತದ ಮತ್ತೊಬ್ಬ ಆಟಗಾರ್ತಿ  ದೀಪಿಕಾ ಪಳ್ಳಿಕಲ್ ಈ ಸಾಧನೆಯನ್ನು ಮಾಡಿದ್ದರು.

ಮಾರ್ಚ್‌ನಿಂದ ಅವರು ಯಾವುದೇ ಟೂರ್ನಿಯಲ್ಲಿ ಆಡಲಿಲ್ಲ. ಕೋವಿಡ್ –19 ಹಾವಳಿಯಿಂದಾಗಿ ಸ್ಕ್ವಾಷ್ ಚಟುವಟಿಕೆಗಳು ಸ್ಥಗಿತವಾಗಿರುವುದು ಇದಕ್ಕೆ ಕಾರಣ.  ಆಗಸ್ಟ್‌ ಅಂತ್ಯದವರೆಗೂ ಯಾವುದೇ ಚಟುವಟಿಕೆ ಆರಂಭವಾಗುವುದಿಲ್ಲ ಎಂದು ಪಿಎಸ್‌ಎ ತಿಳಿಸಿದೆ.

ಈಜಿಪ್ತ್ ದೇಶದ ನೌರನ್ ಗೋಹರ್ ಅವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಸುಮಾರು 19 ತಿಂಗಳುಗಳ ಕಾಲ ಮೊದಲ ಸ್ಥಾನದಲ್ಲಿದ್ದ ರನೀಮ್ ಹೋದ ತಿಂಗಳು ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು.

ಪುರುಷರ ವಿಭಾಗದಲ್ಲಿ ಭಾರತದ ಸೌರವ್ ಘೋಷಾಲ್ 13ನೇ ಸ್ಥಾನ ಪಡೆದುಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು