ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಎಚ್ ಹಾಕಿ: ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ

Last Updated 1 ಮೇ 2021, 21:12 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಪುರುಷರ ಹಾಕಿ ತಂಡ ಎಫ್‌ಐಎಚ್‌ ಪ್ರೊ ಲೀಗ್‌ನ ಮೂರನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಮುಂದಿನ ವರ್ಷದ ಫೆಬ್ರುವರಿ ಐದರಂದು ಈ ಪಂದ್ಯ ನಡೆಯಲಿದೆ ಎಂದು ವಿಶ್ವ ಹಾಕಿ ಫೆಡರೇಷನ್ ಶನಿವಾರ ತಿಳಿಸಿದೆ.

ನ್ಯೂಜಿಲೆಂಡ್ ಸೇರಿದಂತೆ ಫೆಬ್ರುವರಿ ತಿಂಗಳಲ್ಲಿ ಭಾರತ ಮೂರು‍ ‍ದೇಶಗಳನ್ನು ಎದುರಿಸಲಿದೆ. 12 ಮತ್ತು 13ರಂದು ಆಸ್ಟ್ರೇಲಿಯಾ ವಿರುದ್ಧ, 26 ಮತ್ತು 27ರಂದು ಸ್ಪೇನ್‌ ವಿರುದ್ಧ ಪಂದ್ಯಗಳು ನಡೆಯಲಿವೆ. ನಂತರ ತವರಿನಲ್ಲಿ ಜರ್ಮನಿ ಮತ್ತು ಅರ್ಜೆಂಟೀನಾವನ್ನು ಎದುರಿಸಲಿದೆ. ಜರ್ಮನಿ ಎದುರು ಮಾರ್ಚ್‌ 12, 13 ಮತ್ತು ಅರ್ಜೆಂಟೀನಾ ವಿರುದ್ಧ ಮಾರ್ಚ್‌ 19, 20ರಂದು ಪಂದ್ಯಗಳು ನಡೆಯಲಿವೆ.

ಏಪ್ರಿಲ್ ಎರಡು ಮತ್ತು ಮೂರರಂದು ಇಂಗ್ಲೆಂಡ್‌ ವಿರುದ್ಧ, ಜೂನ್ 11 ಮತ್ತು 12ರಂದು ಬೆಲ್ಜಿಯಂ ವಿರುದ್ಧ, ಜೂನ್ 18 ಮತ್ತು 19ರಂದು ನೆದರ್ಲೆಂಡ್ಸ್ ವಿರುದ್ಧ ಭಾರತ ತಂಡದ ಪಂದ್ಯಗಳು ನಡೆಯಲಿವೆ.

ಎರಡನೇ ಆವೃತ್ತಿಯ ಪಂದ್ಯಗಳು ಈಗ ನಡೆಯುತ್ತಿದ್ದು ಭಾರತ ಈ ತಿಂಗಳ ಕೊನೆಯಲ್ಲಿ ಸ್ಪೇನ್ ಮತ್ತು ಜರ್ಮನಿ ವಿರುದ್ಧ ಕಣಕ್ಕೆ ಇಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT