ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಬ್ಯಾಸ್ಕೆಟ್‌ಬಾಲ್‌ ಅರ್ಹತಾ ಪಂದ್ಯ: ಭಾರತಕ್ಕೆ ಲೆಬನಾನ್‌ ಸವಾಲು

Last Updated 29 ಆಗಸ್ಟ್ 2022, 2:53 IST
ಅಕ್ಷರ ಗಾತ್ರ

ಬೆಂಗಳೂರು: ಫಿಬಾ ವಿಶ್ವಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಏಷ್ಯಾ ವಲಯದ ಅರ್ಹತಾ ಪಂದ್ಯದಲ್ಲಿ ಭಾರತ ತಂಡ ಸೋಮವಾರ ಲೆಬನಾನ್‌ ವಿರುದ್ಧ ಸೆಣಸಾಡಲಿದೆ.

ಕಂಠೀರವ ಕ್ರೀಡಾಂಗಣ ದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಯಿಸಬೇಕಾದರೆ ಭಾರತ ಕಠಿಣ ಪರಿಶ್ರಮ ಪಡಬೇಕಿರುವುದು ಅನಿ ವಾರ್ಯ. ಏಕೆಂದರೆ ಆತಿಥೇಯರಿಗೆ ಹೋಲಿಸಿದರೆ, ಲೆಬನಾನ್‌ ಬಲಿಷ್ಠ ಎನಿಸಿಕೊಂಡಿದೆ. ತವರು ಪ್ರೇಕ್ಷಕರ ಮುಂದೆ ಆಡುವುದರಿಂದ ಭಾರತ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ.

ಕೋಚ್‌ ವಸೆಲಿನ್‌ ಮ್ಯಾಟಿಚ್ ಅವರ ಮಾರ್ಗದರ್ಶನದಲ್ಲಿ ಆಡಲಿರುವ ಭಾರತ ತಂಡ ಅಮರೇಂದ್ರ ನಾಯಕ್, ಸಹಜ್‌ ಪ್ರತಾಪ್‌ ಸಿಂಗ್‌ ಮತ್ತು ಸೆಜಿನ್‌ ಮ್ಯಾಥ್ಯೂ ಅವರನ್ನು ನೆಚ್ಚಿಕೊಂಡಿದೆ.

ಭಾರತ ತಂಡ ಅರ್ಹತಾ ಸುತ್ತಿನ ಈ ಹಿಂದಿನ ಪಂದ್ಯದಲ್ಲಿ ಜೋರ್ಡಾನ್‌ ಎದುರು 64-80 ರಲ್ಲಿ ಸೋತಿತ್ತು.

ವಿಶ್ವಕಪ್‌ ಟೂರ್ನಿಯ 7 ಸ್ಥಾನಗಳಿಗೆ ಏಷ್ಯಾ ವಲಯದಿಂದ 16 ತಂಡಗಳು ಪೈಪೋಟಿಯಲ್ಲಿವೆ. ವಿಶ್ವಕಪ್‌ ಟೂರ್ನಿ 2023ರ ಆ.25ರಿಂದ ಸೆ.10ರ ವರೆಗೆ ಫಿಲಿಪ್ಪೀನ್ಸ್‌, ಜಪಾನ್‌ ಮತ್ತು ಇಂಡೊನೇಷ್ಯಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

ಪಂದ್ಯ ಆರಂಭ: ಸಂಜೆ 6

ಸ್ಥಳ: ಕಂಠೀರವ ಕ್ರೀಡಾಂಗಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT