ಶನಿವಾರ, ಮೇ 21, 2022
25 °C
ಬಿಲ್ಲಿ ಜೀನ್‌ ಕಿಂಗ್ ಕಪ್ ಟೆನಿಸ್‌ ಟೂರ್ನಿ

ಟೆನಿಸ್‌ ಟೂರ್ನಿ: ಅಂಕಿತಾ, ಋತುಜಾ ಮಿಂಚು: ಭಾರತಕ್ಕೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಂಟಲ್ಯಾ, ಟರ್ಕಿ: ಭಾರತ ತಂಡವು ಬಿಲ್ಲಿ ಜೀನ್ ಕಿಂಗ್ ಕಪ್ ಟೂರ್ನಿಯಲ್ಲಿ ಮೊದಲ ಜಯ ಗಳಿಸಿದೆ. ಗುರುವಾರ ರಾತ್ರಿ ಇಲ್ಲಿ ನಡೆದ ಎರಡನೇ ಪಂದ್ಯದಲ್ಲಿ 2–0ಯಿಂದ ಟರ್ಕಿ ತಂಡದ ಎದುರು ಮೇಲುಗೈ ಸಾಧಿಸಿತು. 

ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಹಣಾಹಣಿಯಲ್ಲಿ ಭಾರತದ ಋತುಜಾ ಭೋಸ್ಲೆ 6–4, 6–1ರಿಂದ ಬೀಟ್‌ರೈಸ್‌ ಗುಮುಲ್ಯ ಅವರನ್ನು ಸೋಲಿಸಿದರು. 23 ನಿಮಿಷಗಳ ಹಣಾಹಣಿಯಲ್ಲಿ ಋತುಜಾ ಅವರಿಗೆ ಗೆಲುವು ಒಲಿಯಿತು.

52 ನಿಮಿಷಗಳ ಕಾಲ ನಡೆದ ಎರಡನೇ ಪಂದ್ಯದಲ್ಲಿ ಅಂಕಿತಾ ರೈನಾ 6-1, 6-2ರಿಂದ ಆಲ್ದಿಲಾ ಸುಜಿಯಾದಿ ಅವರನ್ನು ಮಣಿಸಿದರು.

ಏಷ್ಯಾ/ಒಸೀನಿಯಾ ಗುಂಪಿನ ಮೊದಲ ಪಂದ್ಯದಲ್ಲಿ ಚೀನಾ ತಂಡದ ಎದುರು ಭಾರತ 0–3ರಿಂದ ಸೋತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು