ಸೋಮವಾರ, ಆಗಸ್ಟ್ 19, 2019
28 °C

ಭಾರತ ಆರ್ಚರಿ ಸಂಸ್ಥೆ ಅಮಾನತು

Published:
Updated:

ಕೋಲ್ಕತ್ತ (ಪಿಟಿಐ): ಎರಡು ಪ್ರತ್ಯೇಕ ಸಂಸ್ಥೆಗಳನ್ನು ಆಯ್ಕೆ ಮಾಡುವ ಮೂಲಕ ಮಾರ್ಗ ದರ್ಶಿ ಸೂತ್ರಗಳನ್ನು ಧಿಕ್ಕರಿಸಿದ ಭಾರತ ಆರ್ಚರಿ ಸಂಸ್ಥೆಯನ್ನು (ಎಎಐ), ವಿಶ್ವ ಆರ್ಚರಿ (ಡಬ್ಲ್ಯುಎ) ಗುರುವಾರ ಅಮಾ ನತು ಮಾಡಿದೆ. ಈ ತಿಂಗಳ ಕೊನೆಯೊಳಗೆ ಎಲ್ಲವನ್ನು ಸರಿಪ ಡಿಸುವಂತೆ ತಾಕೀತು ಮಾಡಿದೆ.

ಸೋಮವಾರದಿಂದಲೇ ಅಮಾನತು ಜಾರಿಗೆ ಬಂದಿದೆ. ಇದೇ ತಿಂಗಳ 19 ರಿಂದ 25ರವರೆಗೆ ಮ್ಯಾಡ್ರಿಡ್‌ (ಸ್ಪೇನ್‌)ನಲ್ಲಿ ವಿಶ್ವ ಯುವ ಆರ್ಚರಿ ಚಾಂಪಿಯನ್‌ಷಿಪ್‌ ನಡೆಯಲಿದ್ದು, ಅಲ್ಲಿ ಭಾರತ ತಂಡ ರಾಷ್ಟ್ರಧ್ವಜದಡಿ ಭಾಗವಹಿಸಲು ಕೊನೆಯ ಅವಕಾಶ ನೀಡಲಾಗಿದೆ.

ಭಾರತ ಆರ್ಚರಿ ಸಂಸ್ಥೆಯನ್ನು ಅಮಾನತುಗೊಳಿಸುವ ಮೂಲಕ ವಿಶ್ವ ಆರ್ಚರಿಯು ಜೂನ್‌ನಲ್ಲಿ ತೆಗೆದುಕೊಂಡ ನಿರ್ಧಾರ ಜಾರಿಮಾಡುತ್ತಿದೆ ಎಂದು ವಿಶ್ವ ಆರ್ಚರಿ ಮಹಾ ಪ್ರಧಾನ ಕಾರ್ಯದರ್ಶಿ ಟಾಮ್‌ ಡಿಲೆನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಳಜಗಳ ಬಗೆಹರಿಸಿ ಸಂಸ್ಥೆ ಒಗ್ಗೂಡಿಸಲು ಜುಲೈ ಕೊನೆಯವರೆಗೆ ಎಎಐಗೆ ವಿಶ್ವ ಆರ್ಚರಿಗೆ ಗಡುವನ್ನು ನೀಡಿತ್ತು.

Post Comments (+)