ಟೋಕಿಯೊ: ಭಾರತದ ಈಕ್ವೆಸ್ಟ್ರಿಯನ್ ಪಟು ಫವಾದ್ ಮಿರ್ಜಾ ಅವರು ಕ್ರೀಡಾಕೂಟದಲ್ಲಿ ಉತ್ತಮ ಸಾಮರ್ಥ್ಯ ತೋರಿದರು. ಕ್ರಾಸ್ ಕಂಟ್ರಿ ಸ್ಪರ್ಧೆಯ ಬಳಿಕ 22ನೇ ಸ್ಥಾನ ಗಳಿಸಿದ ಅವರು ಫೈನಲ್ ತಲುಪುವ ನಿರೀಕ್ಷೆ ಮೂಡಿಸಿದ್ದಾರೆ. ಭಾನುವಾರದ ಸ್ಪರ್ಧೆಯಲ್ಲಿ ಅವರಿಗೆ 11.20 ಪೆನಾಲ್ಟಿ ಪಾಯಿಂಟ್ಸ್ ನೀಡಲಾಯಿತು.

ಸೋಮವಾರ ನಡೆಯುವ ವೈಯಕ್ತಿಕ ಶೋ ಜಂಪಿಂಗ್ ಅರ್ಹತಾ ಸುತ್ತುಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದರೆ, ಬೆಂಗಳೂರಿನ ಮಿರ್ಜಾ ಅವರು ಅಗ್ರ 25 ಈಕ್ವೆಸ್ಟ್ರಿಯನ್ ಪಟುಗಳಲ್ಲಿ ಸ್ಥಾನ ಗಳಿಸಲಿದ್ದಾರೆ. ಆ ಮೂಲಕ ಅದೇ ದಿನ ಸಂಜೆ ನಡೆಯುವ ಫೈನಲ್ಗೆ ಪ್ರವೇಶ ಪಡೆಯಲಿದ್ದಾರೆ.

ಸಿ ಫಾರೆಸ್ಟ್ ಕ್ರಾಸ್ ಕಂಟ್ರಿ ಕೋರ್ಸ್ನಲ್ಲಿ ನಡೆದ ಸವಾಲಿನ ಇವೆಂಟಿಂಗ್ ಸ್ಪರ್ಧೆಯಲ್ಲಿ ಸಿನೊರ್ ಮೆಡಿಕಾಟ್ ಕುದುರೆಯೊಂದಿಗೆ ಮಿರ್ಜಾ ಗಮನಸೆಳೆದರು. ಎಂಟು ನಿಮಿಷಗಳಲ್ಲಿ ಅವರು ಕ್ರಾಸ್ ಕಂಟ್ರಿ ರನ್ ಪೂರ್ಣಗೊಳಿಸಿದರು. ಸದ್ಯ ಅವರ ಬಳಿ ಒಟ್ಟು 39.20 ಪೆನಾಲ್ಟಿ ಪಾಯಿಂಟ್ಗಳಿವೆ.

ಈಕ್ವೆಸ್ಟ್ರಿಯನ್ನವೈಯಕ್ತಿಕ ಇವೆಂಟಿಂಗ್ ಕ್ರಾಸ್ಕಂಟ್ರಿಯಲ್ಲಿ ಭಾಗವಹಿಸುವವರು ಟೈಮ್ ಪೆನಾಲ್ಟಿ ತಪ್ಪಿಸಲು ಸ್ಪರ್ಧೆಯನ್ನು 7 ನಿಮಿಷ 45 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಪೆನಾಲ್ಟಿ ಪಾಯಿಂಟ್ ಕಡಿಮೆಯಾದಷ್ಟೂ ಸವಾರನ ಸ್ಥಾನಗಳಲ್ಲಿ ಏರಿಕೆಯಾಗುತ್ತದೆ.

ಭಾನುವಾರ ಕ್ರಾಸ್ಕಂಟ್ರಿ ಸ್ಪರ್ಧೆಗಳ ಅಂತ್ಯಕ್ಕೆ ಗ್ರೇಟ್ ಬ್ರಿಟನ್ ಆಲಿವರ್ ಟೌನೆಂಡ್ (ಕುದುರೆ: ಬ್ಯಾಲಗ್ಮೋರ್ ಕ್ಲಾಸ್) ಮೊದಲ ಸ್ಥಾನದಲ್ಲಿದ್ದರು. ಅವರದೇ ದೇಶದ ಲೌರಾ ಕೊಲೆಟ್ (ಲಂಡನ್ 52) ಮೂರನೇ ಸ್ಥಾನ ಮತ್ತು ಜರ್ಮನಿಯ ಜುಲಿಯಾ ಕ್ರಾಜೆವಸ್ಕಿ (ಅಮಂಡ್ ಡಿ ಬಿನೆವಲ್ಲಿ) ಎರಡನೇ ಸ್ಥಾನದಲ್ಲಿದ್ದರು

ಫವಾದ್ ಬಳಿಯಿರುವ ಒಟ್ಟು ಪೆನಾಲ್ಟಿ ಪಾಯಿಂಟ್ಸ್: 39.20

ಕ್ರಾಸ್ಕಂಟ್ರಿ ರೇಸ್ ಅಂತ್ಯಕ್ಕೆ ಗಳಿಸಿದ ಸ್ಥಾನ: 22

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.