ಶನಿವಾರ, ಜೂನ್ 25, 2022
25 °C

ಚೆಸೇಬಲ್ ಟೂರ್ನಿ: ಸೆಮಿಗೆ ಪ್ರಜ್ಞಾನಂದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್‌. ಪ್ರಜ್ಞಾನಂದ ಅವರು ಮೆಲ್ಟ್‌ವೇರ್‌ ಚಾಂಪಿಯನ್ಸ್ ಚೆಸ್‌ ಟೂರ್ ಚೆಸೇಬಲ್‌ ಮಾಸ್ಟರ್‌ ಆನ್‌ಲೈನ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

16 ವರ್ಷದ ಪ್ರಜ್ಞಾನಂದ ಎಂಟರಘಟ್ಟದ ಪಂದ್ಯದಲ್ಲಿ 2.5–1.5ರಿಂದ ಚೀನಾದ ವೇ ಯಿ ಅವರನ್ನು ಪರಾಭವಗೊಳಿಸಿದರು. ಸೆಮಿಫೈನಲ್‌ನಲ್ಲಿ ಅವರಿಗೆ ನೆದರ್ಲೆಂಡ್ಸ್‌ನ ಅನೀಶ್ ಗಿರಿ ಸವಾಲು ಎದುರಾಗಿದೆ.

ಸೋಮವಾರ ತಡರಾತ್ರಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಕಪ್ಪುಕಾಯಿಗಳೊಂದಿಗೆ ಆಡಿದ ಪ್ರಜ್ಞಾನಂದ, 90 ನಡೆಗಳಲ್ಲಿ ಜಯ ತಮ್ಮದಾಗಿಸಿಕೊಂಡರು. ಈ ಪಂದ್ಯದಲ್ಲಿ ಅವರು ಕನಿಷ್ಠ ಜಯ ಸಾಧಿಸಿದ್ದರೂ ಸೆಮಿಫೈನಲ್ ತಲು‍ಪುವುದು ಖಚಿತವಿತ್ತು.

ಆರನೇ ಸುತ್ತಿನಲ್ಲಿ ಪ್ರಜ್ಞಾನಂದ ಅವರು ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಮಣಿಸಿದ್ದರು.

ನಾಲ್ಕರಘಟ್ಟದ ಮತ್ತೊಂದು ಪಂದ್ಯದಲ್ಲಿ ವಿಶ್ವದ ಅಗ್ರ ರ‍್ಯಾಂಕಿನ ಆಟಗಾರ, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್ ಅವರು ಚೀನಾದ ದಿಂಗ್ ಲಿರೆನ್ ಅವರನ್ನು ಎದುರಿಸುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು