ಕಿರಿಯರ ಹಾಕಿ ತಂಡ ಪರಾಭವ

ಮಂಗಳವಾರ, ಜೂನ್ 18, 2019
31 °C
ಬೆಲಾರಸ್‌ ಹಿರಿಯರ ಮಹಿಳಾ ತಂಡಕ್ಕೆ ಭರ್ಜರಿ ಜಯ

ಕಿರಿಯರ ಹಾಕಿ ತಂಡ ಪರಾಭವ

Published:
Updated:

ಬ್ಯಾರನೊವಿಚಿ, ಬೆಲಾರಸ್‌: ಕಳಪೆ ಪ್ರದರ್ಶನ ತೋರಿದ ಭಾರತ ಮಹಿಳಾ ಕಿರಿಯರ ಹಾಕಿ ತಂಡವು ಬೆಲಾರಸ್‌ನ ಹಿರಿಯ ಮಹಿಳಾ ತಂಡದ ವಿರುದ್ಧ ಸೋಮವಾರ 1–4 ಗೋಲುಗಳಿಂದ ಮಣಿಯಿತು.

ಪಂದ್ಯದ ಆರಂಭಿಕ ನಿಮಿಷಗಳಲ್ಲೇ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಅವಕಾಶ ದೊರೆಯಿತು. ಈ ವೇಳೆ ಭಾರತದ ಗಗನದೀಪ್‌ ಕೌರ್‌ ತಪ್ಪು ಮಾಡಲಿಲ್ಲ. ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.

ಆ ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾದ ಬೆಲಾರಸ್‌ ಪರ  ಸ್ವಿಯಾಟ್ಲಾನಾ ಬಾಹುಶೆವಿಚ್‌ ಮೊದಲ ಗೋಲು ಬಾರಿಸಿ ಸ್ಕೋರ್‌ ಸಮಬಲಗೊಳಿಸಿದರು.

ಮೊದಲ ಕ್ವಾರ್ಟರ್ ಬಳಿಕ ಆಟದ ವೇಗ ತಗ್ಗಿತು. ಆ ಬಳಿಕ ಆತಿಥೇಯ ತಂಡದ ಕ್ರೆಸ್ಟ್‌ಸಿನಾ ಪಾಪ್ಕೊವಾ ಮತ್ತೊಂದು ಗೋಲು ಗಳಿಸಿ 2–1 ಮುನ್ನಡೆ ತಂದುಕೊಟ್ಟರು. ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಪಂದ್ಯದ ಮೇಲೆ ಹೆಚ್ಚು ನಿಯಂತ್ರಣ ಸಾಧಿಸುವ ವಿಶ್ವಾಸದೊಂದಿಗೆ ಆರಂಭಿಸಿತು. ಆದರೆ ಬೆಲಾರಸ್ ಮತ್ತೊಂದು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿ 3–1ರ ಮುನ್ನಡೆ ಪಡೆಯಿತು.

ಪ್ರವಾಸಿ ತಂಡದ ನಿರಂತರ ಪ್ರಯತ್ನವನ್ನು ವಿಫಲಗೊಳಿಸುತ್ತಲೇ ಮತ್ತೊಂದು ಗೋಲು ದಾಖಲಿಸಿದ ಬೆಲಾರಸ್‌ ಗೆಲುವಿನ ನಗೆ ಬೀರಿತು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !