ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್‌ ಬ್ಯಾಡ್ಮಿಂಟನ್: ನಾಲ್ಕರ ಘಟ್ಟಕ್ಕೆ ಕರ್ನಾಟಕ, ರೈಲ್ವೆ

67ನೇ ರಾಷ್ಟ್ರೀಯ ಸೀನಿಯರ್ ಬಾಲ್-ಬ್ಯಾಡ್ಮಿಂಟನ್
Last Updated 6 ಮಾರ್ಚ್ 2022, 4:26 IST
ಅಕ್ಷರ ಗಾತ್ರ

ಮೂಡುಬಿದಿರೆ: ಆಳ್ವಾಸ್ ಸಂಸ್ಥೆಯಲ್ಲಿ ನಡೆಯುತ್ತಿರುವ 67ನೇ ರಾಷ್ಟ್ರೀಯ ಸೀನಿಯರ್ ಬಾಲ್-ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕರ್ನಾಟಕ ಹಾಗೂ ಭಾರತೀಯ ರೈಲ್ವೆ ತಂಡಗಳು ನಾಲ್ಕರ ಘಟ್ಟಕ್ಕೆ ಆಯ್ಕೆಯಾಗಿವೆ.

ಪುರುಷರ ವಿಭಾಗದಲ್ಲಿ ಕೇರಳ ತಂಡವು ಹರಿಯಾವನ್ನು 35-17, 35-23ರಲ್ಲಿ ಹಾಗೂ ಕೆನರಾ ಬ್ಯಾಂಕ್ ತಂಡ ಪುದುಚೆರಿ ತಂಡವನ್ನು 35-21, 35-14 ಅಂತರದಿಂದ ಮಣಿಸಿತು.

ಪುರುಷರ ಪ್ರೀ-ಕ್ವಾಟರ್ ಫೈನಲ್‌ ನಲ್ಲಿ ಕೇರಳ ತಂಡವು ಮುಂಬೈ ತಂಡವನ್ನು 35-27, 35-22ಗಳಿಂದ, ಕೆನರಾ ಬ್ಯಾಂಕ್ ತಂಡವು, ಚತ್ತೀಸ್‌ಗಢ ವಿರುದ್ಧ 35-18, 35-22ರಲ್ಲಿ ಗೆದ್ದಿತು.

ಪುರುಷರ ಕ್ವಾರ್ಟರ್‌ ಫೈನಲ್ಸ್‌ನಲ್ಲಿ ಭಾರತೀಯ ರೈಲ್ವೆ ತಂಡವು ಕೆನರಾ ಬ್ಯಾಂಕ್ ತಂಡ ವಿರುದ್ಧ 35-19, 35-19 ಅಂತರದಿಂದ ಹಾಗೂ ತೆಲಂಗಾಣ ತಂಡ ಮಹಾರಾಷ್ಟ್ರವನ್ನು 35-18,35-19ರಲ್ಲಿ ಸೋಲಿಸಿತು.

ಮಹಿಳೆಯರ ಕ್ವಾಟರ್ ಫೈನಲ್‌ನಲ್ಲಿ ತಮಿಳುನಾಡು ತಂಡವು ಕೇರಳ ತಂಡವನ್ನು 35-25, 35-28 ಸೆಟ್‌ಗಳಿಂದ, ಕರ್ನಾಟಕ ತಂಡವು ಪುದುಚೆರಿ ತಂಡವನ್ನು 35-21, 35-14 ಅಂತರದಿಂದ ಮಣಿಸಿ ಗೆಲುವು ಸಾಧಿಸಿದವು. ಆಂಧ್ರಪ್ರದೇಶ ತಂಡವು ಬಿಹಾರ ತಂಡವನ್ನು 36-34, 35-22 ಅಂತರದಿಂದ ಸೋಲಿಸಿತು. ಮಹಾರಾಷ್ಟ್ರ ತಂಡವು ಚತ್ತೀಸ್‌ಗಢ ತಂಡವನ್ನು 21-35, 35-31, 36-34 ಅಂತರಗಳಿಂದ ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT