ಶುಕ್ರವಾರ, ಮೇ 20, 2022
19 °C

ಐಒಎ ಸಂವಿಧಾನ ತಿದ್ದುಪಡಿಗೆ 6 ಸದಸ್ಯರ ಸಮಿತಿ ರಚಿಸಿದ ಭಾರತ ಒಲಿಂಪಿಕ್ ಸಮಿತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚುನಾವಣೆಗೂ ಮೊದಲು ತನ್ನ ಸಂವಿಧಾನದ ತಿದ್ದುಪಡಿಗಾಗಿ ಭಾರತ ಒಲಿಂಪಿಕ್ ಸಮಿತಿ (ಐಒಎ) ಆರು ಸದಸ್ಯರ ಸಮಿತಿಯನ್ನು ಭಾನುವಾರ ರಚಿಸಿದೆ. ರಾಷ್ಟ್ರೀಯ ಕ್ರೀಡಾ ನೀತಿ ಅನುಗುಣವಾಗಿ ನಿಯಮಾವಳಿಗಳನ್ನು ರೂಪಿಸಲು ಐಒಎ ಈ ಮೂಲಕ ಉದ್ದೇಶಿಸಿದೆ. 

ಸಮಿತಿಯು ಐಒಎ ಅಧ್ಯಕ್ಷ ನರಿಂದರ್ ಬಾತ್ರಾ, ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ, ಖಜಾಂಚಿ ಆನಂದೇಶ್ವರ್ ಪಾಂಡೆ, ಹಿರಿಯ ಉಪಾಧ್ಯಕ್ಷರಾದ ಅನಿಲ್ ಖನ್ನಾ, ಆರ್.ಕೆ. ಆನಂದ್ ಮತ್ತು ಲಲಿತ್ ಭಾನೋಟ್ ಅವರನ್ನು ಒಳ‌‌‌‌‌ಗೊಂಡಿದೆ.  

ಒಲಿಂಪಿಕ್ ಸಮಿತಿಯ ವಾರ್ಷಿಕ ಸಾಮಾನ್ಯ ಸಭೆಯನ್ನು ನಿವೃತ್ತ ನ್ಯಾಯಮೂರ್ತಿ ರಾಜೀವ್ ಸಹಾಯ್ ಎಂಡ್ಲಾವ್ ಅವರು ನಡೆಸಿದರು. ಸಭೆಯ ಹಿನ್ನೆಲೆಯಲ್ಲಿ ಅವರನ್ನು ಆಡಳಿತಾಧಿಕಾರಿಯಾಗಿ ದೆಹಲಿ ಹೈಕೋರ್ಟ್‌ ನೇಮಕ ಮಾಡಿತ್ತು.  ಮಾಜಿ ಕ್ರೀಡಾ ಕಾರ್ಯದರ್ಶಿ ಇಂಜೆತಿ ಶ್ರೀನಿವಾಸ್ ಅವರು ಇದ್ದರು. 

ಸಾಮಾನ್ಯ ಸಭೆ ಭಾನುವಾರ ಗುವಾಹಟಿಯಲ್ಲಿ ನಡೆಯಬೇಕಿತ್ತು. ಆದರೆ ವಕೀಲ ರಾಹುಲ್‌ ಮೆಹ್ರಾ ಅವರು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಮಾಡಿರುವ ಮನವಿಯ ಹಿನ್ನೆಲೆಯಲ್ಲಿ ದೆಹಲಿಗೆ ಸ್ಥಳಾಂತರಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು