ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್‌ಗೆ ಮಾನಾ ಪಟೇಲ್

Last Updated 2 ಜುಲೈ 2021, 18:09 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಈಜುಗಾರ್ತಿ ಮಾನಾ ಪಟೇಲ್ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ.

ಅವರು ‘ಸಾರ್ವತ್ರಿಕ ಕೋಟಾ‘ದಲ್ಲಿ ಆಯ್ಕೆಯಾಗಿದ್ದಾರೆ ಎಂದು ಭಾರತ ಈಜು ಸಂಸ್ಥೆ (ಎಸ್‌ಎಫ್‌ಐ) ತಿಳಿಸಿದೆ.

ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಆಯ್ಕೆಯಾದ ಭಾರತದ ಮೂರನೇ ಹಾಗೂ ಮಹಿಳಾ ವಿಭಾಗದ ಮೊದಲ ಈಜುಪಟುವಾಗಿದ್ದಾರೆ. ಈಗಾಗಲೇ ಪುರುಷರ ವಿಭಾಗದಲ್ಲಿ ಸಾಜನ್ ಪ್ರಕಾಶ್ ಮತ್ತು ಕನ್ನಡಿಗ ಶ್ರೀಹರಿ ನಟರಾಜ್ ಅವರು ‘ಎ‘ ಅರ್ಹತೆ ಗಳಿಸಿ ಆಯ್ಕೆಯಾಗಿದ್ದರು.

ಮಾನಾ ಅವರು 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಭಾಗವಹಿಸುವರು.

ಸಾರ್ವತ್ರಿಕ ಕೋಟಾದಲ್ಲಿ ಒಬ್ಬ ಪುರುಷ ಮತ್ತು ಒಬ್ಬರು ಮಹಿಳಾ ಈಜುಪಟುವನ್ನು ಆಯ್ಕೆ ಮಾಡುವ ಅವಕಾಶ ಇರುತ್ತದೆ. ಒಲಿಂಪಿಕ್ಸ್‌ ಆಯ್ಕೆ ಸುತ್ತಿನಲ್ಲಿ ಬಿ ಟೈಮ್ಆಧಾರದ ಮೇಲೆ ಫಿನಾ (ಅಂತರರಾಷ್ಟ್ರೀಯ ಈಜು ಫೆಡರೇಷನ್) ಆಹ್ವಾನ ನೀಡುತ್ತದೆ.

‘ಬಹಳ ಸಂತಸವಾಗಿದೆ. ನನ್ನ ಸಹ ಈಜುಪಟುಗಳು ಒಲಿಂಪಿಕ್ಸ್‌ಗೆ ಆಯ್ಕೆಯಾದ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೆ. ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೆ. ಇದೀಗ ನಾನು ಕೂಡ ಅವರೊಂದಿಗೆ ಟೋಕಿಯೊಗೆ ತೆರಳುತ್ತಿರುವುದು ಬಹಳ ಹೆಮ್ಮೆಯಿನಿಸುತ್ತಿದೆ‘ ಎಂದು 21 ವರ್ಷದ ಮಾನಾ ಪಟೇಲ್ ಹೇಳಿದ್ದಾರೆ.

ಮಾನಾ ಅವರು 2019ರಲ್ಲಿ ಹಿಮ್ಮಡಿಯ ಗಾಯದಿಂದ ಬಳಲಿದ್ದರು. ಅದಾದ ನಂತರ ಈ ವರ್ಷವಷ್ಟೇ ಅವರು ಈಜು ಸ್ಪರ್ಧೆಗಳಿಗೆ ಮರಳಿದ್ದರು.

ಹೋದ ಏಪ್ರಿಲ್‌ನಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆದಿದ್ದ ಓಪನ್ ಈಜು ಚಾಂಪಿಯನ್‌ಷಿಪ್‌ನಲ್ಲಿ 100 ಮೀಟರ್ಸ್‌ ಬ್ಯಾಕ್ಸ್‌ಸ್ಟೋಕ್‌ನಲ್ಲಿ (1ನಿಮಿಷ, 4.47ಸೆಕೆಂಡು) ಚಿನ್ನದ ಪದಕ ಜಯಿಸಿದ್ದರು.

‘ಬೆಲ್‌ಗ್ರೇಡ್‌ನಲ್ಲಿ ಈಚೆಗೆ ನಡೆದಿದ್ದ ಅರ್ಹತಾ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ ಅರ್ಹತಾ ಮಟ್ಟಕ್ಕಿಂತ 0.01 ಸೆಕೆಂಡು ಹಿಂದುಳಿದಿದ್ದೆ‘ ಎಂದು ಮಾನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT