ಏಷ್ಯನ್‌ ಗೇಮ್ಸ್‌: ಭದ್ರತೆಗೆ ಕಟ್ಟುನಿಟ್ಟಿನ ಕ್ರಮ

7

ಏಷ್ಯನ್‌ ಗೇಮ್ಸ್‌: ಭದ್ರತೆಗೆ ಕಟ್ಟುನಿಟ್ಟಿನ ಕ್ರಮ

Published:
Updated:

ಜಕಾರ್ತ: ಮುಂದಿನ ತಿಂಗಳು ನಡೆಯುವ ಏಷ್ಯನ್‌ ಕ್ರೀಡಾಕೂಟಕ್ಕೂ ಮುನ್ನ ನಗರದದಾದ್ಯಂತ ಬಿಗಿ ಭದ್ರತೆ ಕಲ್ಪಿಸಲು ಇಲ್ಲಿನ ಪೋಲಿಸರು ನಿರ್ಧರಿಸಿದ್ದಾರೆ. 

ಅಪರಾಧ ಪ್ರಕರಣಗಳು, ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಸಾವಿರಾರು ಸಂಖ್ಯೆಯಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ. 

‘40 ಸಾವಿರಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳನ್ನು ಜಕಾರ್ತ ಹಾಗೂ ಸುಮಾತ್ರದಲ್ಲಿರುವ ಪಾಲೆಂಬಂಗ್‌ ನಗರಗಳಿಗೆ ಕಳಿಸಲಾಗುವುದು. ಹೆಚ್ಚುವರಿಯಾಗಿ 10 ಸಾವಿರ ಅಧಿಕಾರಿಗಳನ್ನು ಇದೇ ಕಾರ್ಯಕ್ಕಾಗಿ ಕಾಯ್ದಿರಿಸಲಾಗಿದೆ. ಈ ಎರಡು ನಗರಗಳಾದ್ಯಂತ ನೂರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದೆ’ ಎಂದು ಇಲ್ಲಿನ ಪೊಲೀಸ್‌ ವಕ್ತಾರ ಯೂಸ್ರಿ ಯೂನುಸ್‌ ಹೇಳಿದ್ದಾರೆ.

ಕ್ರೀಡಾಕೂಟವು, ಆಗಸ್ಟ್‌ 18ರಿಂದ ಸೆಪ್ಟೆಂಬರ್‌ 2ರವರೆಗೂ ಈ ಎರಡು ನಗರಗಳಲ್ಲಿ ನಡೆಯಲಿದೆ. 45 ರಾಷ್ಟ್ರಗಳ 11 ಸಾವಿರಕ್ಕೂ ಹೆಚ್ಚು ಅಥ್ಲೀಟ್‌ಗಳು ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !