ಚೆಸ್‌: ಜುಗಿರೊವ್ ಎದುರು ಭಾರತದ ಇನಿಯನ್‌ಗೆ ಜಯ

7

ಚೆಸ್‌: ಜುಗಿರೊವ್ ಎದುರು ಭಾರತದ ಇನಿಯನ್‌ಗೆ ಜಯ

Published:
Updated:

ಅಬು ಧಾಬಿ: ರಷ್ಯಾದ ಗ್ರ್ಯಾಂಡ್‌ಮಾಸ್ಟರ್‌ ಜುಗಿರೊವ್‌ ಸನಾನ್ ಎದುರು ಜಯ ಸಾಧಿಸಿ ಭಾರತದ ಯುವ ಚೆಸ್ ಆಟಗಾರ ಪಿ.ಇನಿಯನ್‌ ಗಮನ ಸೆಳೆದರು. ಇಲ್ಲಿ ನಡೆಯುತ್ತಿರುವ ಅಬು ಧಾಬಿ ಮಾಸ್ಟರ್ಸ್‌ ಟೂರ್ನಿಯಲ್ಲಿ ಭಾನುವಾರ ಈ ಸಾಧನೆ ಮಾಡಿದ ಅವರು ಒಟ್ಟು 3.5 ಪಾಯಿಂಟ್‌ ಗಳಿಸಿದರು.

ಆರಂಭದಿಂದಲೇ ಉತ್ತಮ ಆಟ ಆಡಿದ ಇನಿಯನ್‌ ಎದುರಾಳಿಯನ್ನು ನಿರಂತರವಾಗಿ ಕಂಗೆಡಿಸಿದರು. ಈ ಮೂಲಕ ಅಮೋಘ ಜಯ ದಾಖಲಿಸಿದರು.

ಜಾರ್ಜಿಯಾದ ಇವಾನ್ ಚೆಪರಿನೊವ್‌ ಅವರ ಜೊತೆ ಡ್ರಾ ಸಾಧಿಸಿದ ನಿಹಾಲ್ ಸರೀನ್ ಕೂಡ 3.5 ಪಾಯಿಂಟ್‌ಗಳನ್ನು ಸಂಪಾದಿಸಿದರು. ಅರ್ಮೇನಿಯಾದ ಟಿಗ್ರಾನ್‌ ಪೆಟ್ರೋಸಿಯನ್‌ ವಿರುದ್ಧ ಡ್ರಾ ಸಾಧಿಸಿ ಇ. ಅರ್ಜುನ್ ಗಮನ ಸೆಳೆದರು.

ಎಸ್‌.ಎಲ್‌.ನಾರಾಯಣನ್‌ ಫಿಲಿಪ್ಪೀನ್ಸ್‌ನ ಒಲಿವರ್ ದಿಮಾಕ್ಲಿಂಗ್‌ ಅವರನ್ನು, ಮುರಳಿ ಕಾರ್ತಿಕೇಯನ್‌ ಭಾರತದವರೇ ಆದ ಆನಂದ್ ನಾಡಾರ್‌ ಅವರನ್ನು, ಯುಎಇಯ ಒಮರ್ ನೊಮಾನ್ ಅವರನ್ನು ಆರ್ಯನ್ ಚೋಪ್ರಾ, ಕೃಷ್ಣಾಟೆರ್‌ ಕುಶಾಗೆರ್‌ ಅವರನ್ನು ವಿಷ್ಣು ಪ್ರಸನ್ನ ಮಣಿಸಿದರು.

ಲುಪುಲೆಸ್ಕ್‌ ಕಾನ್ಸ್‌ಟಂಟೈನ್‌ ಎದುರು ಸ್ವಪ್ನಿಲ್‌ ಎಸ್‌.ಧೋಪಡೆ, ಜಾರ್ಜಿಯಾದ ಜೋಜುವಾ ಡೇವಿಡ್‌ ಜೊತೆ ಅಭಿಜಿತ್ ಕುಂಟೆ, ವಿಯೆಟ್ನಾಂನ ಗುಯೆನ್‌ ಆನ್‌ ಕೊಹಿ ಎದುರು ಅರವಿಂದ ಚಿದಂಬರಂ ಡ್ರಾ ಸಾಧಿಸಿದರು.

ಇಟಲಿಯ ಡ್ಯಾನಿಯೆಲಿ ವೊಕಾಟುರೊ ಎದುರು ದೇಬಾಶಿಷ್ ದಾಸ್, ಐರ್ಲೆಂಡ್‌ನ ಅಮಿನ್‌ ತಬತಬಾಯ್‌ ಎದುರು ಎನ್‌.ಆರ್‌.ವಿಘ್ನೇಶ್‌, ಬ್ರೆಜಿಲ್‌ನ ಅಲೆಕ್ಸಾಂಡರ್‌ ಫಿಯೆರ್‌ ಎದುರು ಡಿ.ಗುಕೇಶ್‌ ಸೋತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !