ಮಂಗಳವಾರ, ಜನವರಿ 28, 2020
25 °C
ಆಳ್ವಾಸ್‌ ಅಥ್ಲೀಟ್‌ಗಳ ಮೇಲುಗೈ: ದಾಖಲೆ ಉತ್ತಮಪಡಿಸಿಕೊಂಡ ಜೇಷಾ ಪ್ರದಿ

ಮಂಗಳೂರು ವಿ.ವಿ ಮುಡಿಗೆ ಚಾಂಪಿಯನ್‌ ಪಟ್ಟ

ಮಹೇಶ್‌ ಎಸ್‌. ಕನ್ನೇಶ್ವರ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಾಲ್ಕು ಕೂಟ ದಾಖಲೆ, ತಲಾ ಒಂಬತ್ತು ಚಿನ್ನ ಮತ್ತು ಬೆಳ್ಳಿ, ಐದು ಕಂಚಿನ ಪದಕಗಳನ್ನು ಗೆದ್ದುಕೊಂಡ ಮಂಗಳೂರು ವಿಶ್ವವಿದ್ಯಾಲವು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಕೂಟದ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿತು.

ರಾಜೀವ್‌ಗಾಂಧಿ ಆರೋಗ್ಯವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಕಾಲೇಜು ಸಹಯೋಗದಲ್ಲಿ ಸ್ವರಾಜ್ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಕೂಟದಲ್ಲಿ ಮಂಗಳೂರು ವಿವಿ ಒಟ್ಟು 170 ಪಾಯಿಂಟ್‌ ಕಲೆ ಹಾಕಿತು. ಈ ಮೂಲಕ ನಾಲ್ಕನೇ ಬಾರಿಯೂ ಚಾಂಪಿಯನ್‌ ಆಯಿತು. ಮದ್ರಾಸ್ ವಿಶ್ವವಿದ್ಯಾಲಯ (98.5 ಪಾಯಿಂಟ್) ರನ್ನರ್‌ ಅಪ್‌ ಆದರೆ ಕೋಟಯಂ ಮಹಾತ್ಮ ಗಾಂಧಿ ವಿವಿ (80 ಪಾಯಿಂಟ್ಸ್‌) ಮೂರನೇ ಸ್ಥಾನ ಗಳಿಸಿತು.

ದಾಖಲೆ ಉತ್ತಮಪಡಿಸಿಕೊಂಡ ಪ್ರದಿ:ಮಂಗಳೂರು ವಿವಿಯ (ಆಳ್ವಾಸ್‌ ಕಾಲೇಜು) ಜೇಷಾ ಪ್ರದಿ ಟ್ರಿಪಲ್‌ ಜಂಪ್‌ನಲ್ಲಿ ತಮ್ಮದೇ ದಾಖಲೆ ಉತ್ತಮಪಡಿಸಿಕೊಂಡು ಚಿನ್ನ ಗಳಿಸಿದರು. ಕೊನೆಯ ದಿನವಾದ ಸೋಮವಾರ ಜೇಷಾ 16.53 ಮೀಟರ್‌ ಸಾಧನೆ ಮಾಡಿದರು. ಪುರುಷರ ಮ್ಯಾರಥಾನ್‌ನಲ್ಲಿ ಗುಲ್ಬರ್ಗ ವಿವಿಯ ಅನಿಲ್‌ ಕುಮಾರ್ ಚಿನ್ನ ಗಳಿಸಿದರು. ಮಹಿಳೆಯರ ಹ್ಯಾಮರ್ ಥ್ರೋನಲ್ಲಿ ಮಂಗಳೂರು ವಿಶ್ವವಿದ್ಯಾಲಯದ (ಆಳ್ವಾಸ್‌ ಕಾಲೇಜು) ವರ್ಷಾ ಚಿನ್ನ ಗಳಿಸಿದರೆ, ಇದೇ ಕಾಲೇಜಿನ ಋತು ಧೀಮಂತ್ ಬೆಳ್ಳಿ ಗೆದ್ದುಕೊಂಡರು.

ಕೊನೆಯ ದಿನದ ಫಲಿತಾಂಶ:

ಪುರುಷರ 200 ಮೀ ಓಟ: ರಗುಲ್‌ ಕುಮಾರ್ (ಕಾಲ: 21.61ಸೆ ಮದ್ರಾಸ್ ವಿವಿ )–1, ಜಾನ್ ಡ್ಯಾನಿಯಲ್ (ಎಸ್‍ಆರ್‌ಎಂ ಇನ್‌ಸ್ಟಿಟ್ಯೂಟ್‌)– 2, ವಿಘ್ನೇಶ್ ಎ- (ಮಂಗಳೂರು ವಿವಿ)-3.

1,500 ಮೀಟರ್‌ ಓಟ: ಚೈತನ್ಯ ಎಚ್‌ (ಕಾಲ: 3 ನಿ 55.38 ಸೆ, ಸಾವಿತ್ರಿಬಾಯಿ ಫುಲೆ ವಿವಿ)- 1, ಸುನಿಲ್ (ಮಹರ್ಷಿ ದಯಾನಂದ ವಿವಿ, ಹರಿಯಾಣ)– 2, ಸೋನು (ಮಹಾರಾಜ ಗಂಗಾಸಿಂಗ್ ವಿವಿ, ರಾಜಸ್ತಾನ)-3. ಟ್ರಿಪಲ್ ಜಂಪ್: ಜೇಷಾ ಪ್ರದಿ (ದೂರ: 16.53 ಮೀ ಮಂಗಳೂರು ವಿವಿ) -1, ಕೂಟ ದಾಖಲೆ– ಹಿಂದಿನ ದಾಖಲೆ: ಜೇಷಾ ಪ್ರದಿ (ದೂರ: 16.36 ಮೀಟರ್‌, ಮುಂಬೈ ವಿವಿ), ಅರುಣ್ ಎ.ಬಿ (ಮಹಾತ್ಮಗಾಂಧಿ ವಿವಿ) -2, ಕಪಿಲ್ ಆನಂದ್ (ರಾಜೀವ್ ಗಾಂಧಿ ವಿವಿ)- 3. ಶಾಟ್‌ಪಟ್‌: ಪ್ರಭು ಕೃಪಾಲ್ ಸಿಂಗ್ (ದೂರ: 17.34 ಮೀ ಪಂಜಾಬ್‌ ವಿಶ್ವವಿದ್ಯಾಲಯ, ಪಟಿಯಾಲ)– 1, ಶಕ್ತಿ ಸೋಲಂಕಿ (ಇಂದಿರಾ ಗಾಂಧಿ ವಿವಿ ಮೀರ್‌ಪುರ)– 2, ಆದಿಲ್ ಶೇರ್ ಸಿಂಗ್ (ಗುರುನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತಸರ )– 3. ಪೋಲ್ ವಾಲ್ಟ್: ಗಾಡ್ವಿನ್ ಡೇಮಿಯನ್ (4.70 ಮೀಟರ್‌ ಕ್ಯಾಲಿಕಟ್ ವಿವಿ)–1, ಪಿ.ಗೌತಮ್  (ಭಾರತೀಯರ್ ವಿವಿ)– 2, ದೀನ್‌ ದಯಾಳನ್ ಜಿ (ರಾಜೀವ್‌ಗಾಂಧಿ ವಿವಿ)– 3. ಮ್ಯಾರಾಥಾನ್: ಅನಿಲಾ ಕುಮಾರ್ (ಕಾಲ: 2 ತಾಸು, 42 ನಿ, 33.58 ಸೆಕೆಂಡ್‌, ಗುಲ್ಬರ್ಗ ವಿವಿ)–1, ಸೌರಭ್ (ಪಂಜಾಬಿ ವಿವಿ, ಪಟಿಯಾಲ)–2, ಸುನಿಲ್ ಕುಮಾರ್ (ಮಹರ್ಷಿ ದಯಾನಂದ ವಿವಿ)-3.

4x400ಮೀ ರಿಲೇ: ಸಿಬಿನ್ ಕುಮಾರ್, ಅವಿನಾಸ್, ಕೆ ಸರಣ್, ಆರ್ ರಾಜೇಶ್ (ಕಾಲ: 3ನಿ 11.00ಸೆ ಮದ್ರಾಸ್ ವಿವಿ )-1, ಟಿಗಿನ್.ಟಿ, ಆನಂದ ವಿಜಯನ್, ಅಮಲ್ ಜೋಸೆಫ್, ಅನಿರುದ್ಧ್ ಸಿ.ಆರ್ (ಮಹಾತ್ಮಗಾಂಧಿ ವಿವಿ)–2, ಆಶಿಶ್, ಯೋಗೇಶ್ ಅಹ್ಲಾವತ್, ಸನ್ನಿ, ಅಮಿತ್ ಬಲಿಯನ್ (ಮಹರ್ಷಿ ದಯಾನಂದ ವಿವಿ)–3. ಮಹಿಳೆಯರ 200 ಮೀ  ಓಟ: ಕೃತಿ ಬೋಯ್ತೆ (ಕಾಲ: 24.71 ಸೆ ಮುಂಬೈ ವಿವಿ)–1, ಹರಿಕಾ ದೇವಿ (ಪಲಂಬೂರು ವಿವಿ)–2, ಶೃತಿರಾಜ್ ಯು.ವಿ (ಕ್ಯಾಲಿಕಟ್ ವಿವಿ)- 3. 1,500 ಮೀಟರ್‌ ಓಟ: ಹರ್ಮಿಲನ್ (ಕಾಲ: 4 ನಿ 24.86 ಸೆಕೆಂಡ್‌ ಪಂಜಾಬ್‌ ವಿವಿ, ಪಟಿಯಾಲ)–1. ಕೂಟ ದಾಖಲೆ; ಹಿಂದಿನ ದಾಖಲೆ: ಚಿತ್ರಾ ಪಿ. ಯು (ಕಾಲ: 4 ನಿ 24.87 ಸೆ ಕ್ಯಾಲಿಕಟ್ ವಿವಿ 2018), ದುರ್ಗಾ ಡಿ (ಸಾವಿತ್ರಿಬಾಯಿ ಫುಲೆ ವಿವಿ)-2, ಬಬಿತ (ಕ್ಯಾಲಿಕಟ್ ವಿವಿ)-3. ಹ್ಯಾಮರ್ ಥ್ರೋ: ವರ್ಷಾ (57.24 ಮೀಟರ್‌- ಮಂಗಳೂರು ವಿವಿ )–1, ಋತು ಧೀಮಂತ್ (ಮಂಗಳೂರು ವಿವಿ) –2, ಹರ್ಷಿತ ಆರ್ (ರಾಜೀವ್ ಗಾಂಧಿ ವಿವಿ)–3. ಟ್ರಿಪಲ್ ಜಂಪ್: ಐಶ್ವರ್ಯಾ ಬಿ (13.29 ಮೀಟರ್‌ ಮಂಗಳೂರು ವಿವಿ)–1, ಸಾಂಡ್ರ ಬಾಬು (ಮಹಾತ್ಮಗಾಂಧಿ ವಿವಿ, ಕೋಟಯಂ)–2, ಎಸ್.ನಂದಿನಿ (ಭಾರತಿಯಾರ್ ವಿವಿ)–3. ಮ್ಯಾರಥಾನ್: ಮುನ್ನಿ ದೇವಿ (3 ತಾಸು 14 ನಿಮಿಷ 42.26 ಸೆ ಮಹರ್ಷಿ ದಯಾನಂದ ವಿವಿ)–1, ರಿಂಕು (ಪಂಜಾಬಿ ವಿವಿ, ಪಟಿಯಾಲ )–2, ಕೆ.ಎಂ.ಲಕ್ಷ್ಮಿ (ಸಿಎಸ್‌ಎಂ ವಿವಿ ಕಾನ್ಪುರ)–3. ಪೋಲ್‌ವಾಲ್ಟ್: ದಿವ್ಯಾ ಮೋಹನ್ (3.70 ಮೀ ಮಹಾತ್ಮಗಾಂಧಿ ವಿವಿ)-1, ಪ್ರೋಸಿ ಮೀನ (ಟಿಪಿಎಸ್ ವಿವಿ)–2, ಬರ್ನಿಕ ಇ (ಮಂಗಳೂರು ವಿವಿ)–3.

4x 400 ಮೀ ರಿಲೇ: ಅರ್ಚನಾ ಎಂ.ಪಿ, ಅಬಿತಾ ಮೇರಿ, ಅರ್ಷಿತಾ ಎಸ್, ಜಿಸ್ನಾ ಮ್ಯಾಥ್ಯೂ (ಕಾಲ: 3 ನಿ 40.01ಸೆ ಕ್ಯಾಲಿಕಟ್ ವಿವಿ)–1, ಸ್ನೇಹಾ, ಎಮಿಲಿ ಕೆ.ಟಿ, ಅಲಿಶಾ ಪಿ.ಆರ್, ಅನಿಲಾ ವೇಣು, ಮಹರ್ಷಿ (ಮಹಾತ್ಮಗಾಂಧಿ ವಿವಿ)-2, ಮನೀಶ್, ಮನ್ಹಿ, ನ್ಯಾನ್ಸಿ, ರಚನ (ದಯಾನಂದ ವಿವಿ)– 3.

ಜೇಷಾ ಪ್ರದಿ, ಜ್ಯೋತಿ ಉತ್ತಮ ಕ್ರೀಡಾಪಟುಗಳು

ಉತ್ತಮ ಕ್ರೀಡಾಪಟುಗಳಾಗಿ ಪುರುಷರ ವಿಭಾಗದಲ್ಲಿ ಆಳ್ವಾಸ್‌ ಕಾಲೇಜಿನ ಜೇಷಾ ಪ್ರದಿ (ಟ್ರಿಪಲ್ ಜಂಪ್‌– 1,115 ಪಾಯಿಂಟ್ಸ್), ಮಹಿಳೆಯರ ವಿಭಾಗದಲ್ಲಿ ಆಚಾರ್ಯ ನಾಗಾರ್ಜುನ ವಿವಿಯ, ವೈ. ಜ್ಯೋತಿ (100ಮೀ ಹರ್ಡಲ್ಸ್‌ 1,146 ಪಾಯಿಂಟ್ಸ್) ಹೊರಹೊಮ್ಮಿದರು.

‘ನಾಡಾ’ ಅಧಿಕಾರಿ ಪ್ರತ್ಯಕ್ಷ

ಅಥ್ಲೆಟಿಕ್ಸ್ ಕೂಟದ ಕೊನೆಯ ದಿನ ಸೋಮವಾರ ರಾಷ್ಟ್ರೀಯ ಉದ್ದೀಪನಾ ನಿಯಂತ್ರಣ ಘಟಕದ (ನಾಡಾ) ಅಧಿಕಾರಿ ಬಂದಿದ್ದರು. ಯಾವುದೇ ಕ್ರೀಡಾಪಟುವಿನ ರಕ್ತದ ಮಾದರಿ ಗಳನ್ನು ಸಂಗ್ರಹ ಮಾಡಿದ ಬಗ್ಗೆ ಅವರು ಯಾವುದೇ ಮಾಹಿತಿ ನೀಡಲಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು