ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿವಿಯ ಏಲಾಕ್ಯ ದಾಖಲೆ

ಅಂತರ ವಿವಿ ಅಥ್ಲೆಟಿಕ್ಸ್–ಆತಿಥೇಯರಿಗೆ 2 ಚಿನ್ನ, 1 ಬೆಳ್ಳಿ
Last Updated 25 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಮೂಡುಬಿದಿರೆ: ಒಂದು ವಾರದಿಂದ ಕಾಲುನೋವಿನ ಸಮಸ್ಯೆ ನಡುವೆಯೂ ಟ್ರ್ಯಾಕ್‍ನಲ್ಲಿ ಎಲ್ಲರ ನಿರೀಕ್ಷೆ ಹುಸಿ ಮಾಡದ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಏಲಾಕ್ಯದಾಸನ್ 100 ಮೀಟರ್ಸ್‌ ಓಟದಲ್ಲಿ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು.

ಇಲ್ಲಿನ ಸ್ವರಾಜ್‌ ಮೈದಾನದಲ್ಲಿ ನಡೆಯುತ್ತಿರುವ 79ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ನಲ್ಲಿ ಎಲಾಕ್ಯದಾಸನ್ ಅವರು 100 ಮೀಟರ್ ಓಟದಲ್ಲಿ 10.41 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಹೋದ ಬಾರಿ ಕೂಟದಲ್ಲಿ ತಾವೇ ಮಾಡಿದ್ದ (!0.49ಸೆ) ದಾಖಲೆಯನ್ನು ಮೀರಿ ನಿಂತರು. ಮಂಗಳೂರು ವಿಶ್ವವಿದ್ಯಾಲಯದ ಪ್ರಜ್ವಲ್ ಮಂದಣ್ಣ ಮತ್ತು ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಮಹಮದ್ ಅಜಮ್ಮ ಕ್ರಮವಾಗಿ ಬೆಳ್ಳೀ ಮತ್ತು ಕಂಚಿನ ಪದಕ ಗಳಿಸಿದರು.

ಪುರುಷರ 5000 ಮೀಟರ್ಸ್ ಓಟದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಅಜಯ್ ಕುಮಾರ್ ಚಿನ್ನದ ಪದಕ ಗೆದ್ದರು. ಅವರು 14 ನಿಮಿಷ 47.15 ಸೆಕೆಂಡ್‍ಗಳಲ್ಲಿ ಗುರಿ ತಲುಪಿದರು.

ಫಲಿತಾಂಶಗಳು: ಪುರುಷರು: 400 ಮೀಟರ್ ಹರ್ಡಲ್ಸ್: ಮಂಜಿತ್ (ಗುರು ಜಂಬೇಶ್ವರ ವಿವಿ ಹರಿಯಾಣ; ಕಾಲ: 51.17 ಸೆಕೆಂಡು)-1, ಸುರೇಂದರ್ (ಸಿಂಘಾನಿಯಾ ವಿವಿ)-2, ಗೌತಮ್ ಗುಪ್ತಾ (ಮಹಾತ್ಮ ಗಾಂಧಿ ವಿವಿ) -3. 20 ಕಿ. ಮೀ, ನಡಿಗೆ: ಆಕಾಶದೀಪ್ ಸಿಂಗ್ (ಪಂಜಾಬ್ ವಿವಿ)- 1ಗಂಟೆ 30 ನಿಮಿಷ 45 ಸೆಕೆಂಡು-1, ನೀರಜ್ ಚೌರಾಸಿ ( ಡಿಡಿಯು ಗೋರಖಪುರ ವಿವಿ)- 2, ಹರದೀಪ್(ಮಹರ್ಷಿ ದಯಾನಂದ ವಿವಿ)–3,800 ಮೀಟರ್ ಓಟ: ಎಂ ರಘುರಾಮ್ ಕಾಲ: 1 ನಿ. 50.41 ಸೆ (ಮದ್ರಾಸ್ ವಿವಿ)-1, ದೇವಯ್ಯಾ ಟಿ ಎಚ್ ಕಾಲ: 1 ನಿ, 50.71 ಸೆ (ಬೆಂಗಳೂರು ವಿವಿ)-2, ಗುರುಮನ್ ಸಿಂಗ್ ಕಾಲ: 1ನಿ. 50.85 ಸೆ (ಪಂಜಾಬ್ ವಿವಿ)-3.

ಮಹಿಳೆಯರು: 400 ಮೀಟರ್ ಹರ್ಡಲ್ಸ್: ಆರ್ ವಿದ್ಯಾ (ಭಾರತೀಯಾರ್‍ ವಿ.ವಿ, ತಮಿಳುನಾಡು)-1, ಶಾಲಿನಿ (ಮಹಾತ್ಮಾ ಗಾಂಧಿ ವಿವಿ)-2, ನಾನ್ಹಿ (ಮಹರ್ಷಿ ದಯಾನಂದ ವಿವಿ)-3, 5000 ಮೀಟರ್ಸ್ ಓಟ: ಆರತಿ ಪಾಟೀಲ (ಸಾವಿತ್ರಿ ಬಾಯಿ ಫುಲೆ ವಿವಿ; 16 ನಿಮಿಷ 55.83 ಸೆಕೆಂಡ್)-1, ಕೆ.ಎಂ. ಅಮೃತಾ (ಮಹಾತ್ಮ ಗಾಂಧಿ ವಿವಿ)-2, ಪ್ರಜಕ್ತಾ ಗೊಡ್ಬಿ( ರಾಷ್ಟ್ರ ಸಂತ ತುಕ್ಡೊಜಿ ಮಹಾರಾಜ ವಿವಿ ನಾಗಪುರ) –3. 800 ಮೀಟರ್ ಓಟ: ಅಭಿತ ಮೇರಿ ಕಾಲ: 2ನಿ. 7.37 ಸೆ (ಕ್ಯಾಲಿಕಟ್ ವಿವಿ)-1, ತೆರೆಸಾ ಜೋಸೆಫ್ ಕಾಲ: 2ನಿ. 8.47 ಸೆ. (ಮಂಗಳೂರು ವಿವಿ)-2, ಹರ್ಮಿಲನ್ ಬೇನ್ಸ್ ಕಾಲ: 2 ನಿ. 8.80 ಸೆ (ಪಂಜಾಬ್ ವಿವಿ)-3.

ಉದ್ಧ ಜಿಗಿತ: ಹರ್ಷಿಣಿ ಸಾರವನ ದೂರ: 6.15 ಮೀ. (ಮದ್ರಾಸ್ ವಿವಿ)-1, ಪ್ರಿಯಾಂಕ ದೂರ: 6. 10 ಮೀ (ರಾಂಚಿ ವಿವಿ)-2, ರೇನು ದೂರ: 6.09 ಮೀ (ಪಂಜಾಬ್ ವಿವಿ)-3. ದಿಸ್ಕಸ್ ಟ್ರೋ: ಅರ್ಪಣ್ ದೀಪಕ್ ಕೌರ್ ದೂರ: 49. 87 ಮೀ (ಗುರುನಾನಕ್ ದೇವ್ ವಿವಿ)-1, ಸೀಮಾ ದೂರ: 47.34 ಮೀ (ಸಿ ಬಿ ಎಲ್ ವಿವಿ)-2, ಕಾರುಣ್ಯಾ ದೂರ: 46. 48 ಮೀ (ಮದ್ರಾಸ್ ವಿವಿ)-3. ಹೈಜಂಪ್: ದೇವಸಾನಾ (ಕ್ಯಾಲಿಕಟ್ ವಿವಿ; ಎತ್ತರ: 1.83 ನೂತನ ದಾಖಲೆ; ಹಳೆಯದು: 1.82 ಮೀಟರ್)–1, ಅಭಿನಯ ಶೆಟ್ಟಿ –2, ಎಸ್. ಬಿ. ಸುಪ್ರೀಯಾ –3 (ಇಬ್ಬರೂ ಮಂಗಳೂರು ವಿವಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT