ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಬಲ್ ಟೆನಿಸ್: ಲಯ ಕಂಡುಕೊಳ್ಳುವ ವಿಶ್ವಾಸ- ಮಣಿಕಾ ಬಾತ್ರಾ

Last Updated 20 ಸೆಪ್ಟೆಂಬರ್ 2022, 13:48 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸವಿದೆ ಎಂದು ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಹೇಳಿದ್ದಾರೆ.

ಬಿವಿಕೆ ಸ್ಪೋರ್ಟ್ಸ್ ಮಂಗಳವಾರ ಆಯೋಜಿಸಿದ್ದ ವರ್ಚುವಲ್ ಸಂವಾದದಲ್ಲಿ ಅವರು ಮಾತನಾಡಿದರು.

2018ರ ಕಾಮನ್‌ವೆಲ್ತ್ ಕೂಟದಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಸೇರಿದಂತೆ ಒಟ್ಟು ನಾಲ್ಕು ಚಿನ್ನದ ಪದಕ ಗೆದ್ದಿದ್ದ ಮಣಿಕಾ, 2019ರ ಏಷ್ಯನ್ ಗೇಮ್ಸ್ ಮಿಶ್ರ ಡಬಲ್ಸ್‌ನಲ್ಲಿ ಕಂಚು ಜಯಿಸಿದ್ದರು. ಆದರೆ ಈ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಬರಿಗೈಯಲ್ಲಿ ಮರಳಿದ್ದರು.

‘ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಂದ್ಯಗಳನ್ನು ಸೋತಿರುವುದಕ್ಕೆ ಖಂಡಿತವಾಗಿಯೂ ನಿರಾಸೆಯಿದೆ. ಆದರೆ ಹಾಗಂತ ಜಗತ್ತೇನೂ ಮುಳುಗಿಲ್ಲ. ಕಾಮನ್‌ವೆಲ್ತ್ ಕೂಟಕ್ಕೂ ಮೊದಲು ವಿಶ್ವ ಟೂರ್ಸ್‌ಗಳಲ್ಲಿ ಉತ್ತಮ ಆಟವಾಡಿದ್ದೆ; ಪ್ರಮುಖ ಆಟಗಾರ್ತಿಯರಿಗೆ ಸೋಲುಣಿಸಿದ್ದೆ‘ ಎಂದು ಮಣಿಕಾ ಹೇಳಿದರು.

‘ಈ ಬಾರಿಯ ಕೂಟದಲ್ಲೂ ಸಾಧ್ಯವಾದಷ್ಟು ಶ್ರೇಷ್ಠ ಆಟವಾಡಿದ್ದೆ. ಆದರೆ ಆಟಗಾರರ ಜೀವನದಲ್ಲಿ ಏರಿಳಿತ ಸಾಮಾನ್ಯ. ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ‘ ಎಂದು ಮಣಿಕಾ ನುಡಿದರು.

ಸದ್ಯ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಣಿಕಾ ಅವರು ಆಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT