ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರೋಣಾಚಾರ್ಯ ಪ್ರಶಸ್ತಿಗೆ ಜಸ್ಪಾಲ್‌ ಹೆಸರು ಶಿಫಾರಸು

Last Updated 18 ಆಗಸ್ಟ್ 2020, 7:45 IST
ಅಕ್ಷರ ಗಾತ್ರ

ನವದೆಹಲಿ: ಶೂಟಿಂಗ್‌ ಕೋಚ್‌ ಜಸ್ಪಾಲ್‌ ರಾಣಾ ಅವರನ್ನು ಈ ಬಾರಿಯ ದ್ರೋಣಾಚಾರ್ಯ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಕ್ರೀಡಾ ಸಚಿವಾಲಯದ ಆಯ್ಕೆ ಸಮಿತಿ ಹೆಸರಿಸಿರುವ 13 ಮಂದಿಯಲ್ಲಿ ರಾಣಾ ಕೂಡ ಒಬ್ಬರಾಗಿದ್ದಾರೆ.

ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆ (ಎನ್‌ಆರ್‌ಎಐ) ರಾಣಾ ಅವರನ್ನು ಹೋದ ವರ್ಷ ಕೂಡ ಈ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಆದರೆ ಅವರಿಗೆ ಪುರಸ್ಕಾರ ಲಭಿಸಿರಲಿಲ್ಲ. ಅನುಭವಿ ಕೋಚ್‌ ರಾಣಾ ಅವರನ್ನು ಆಯ್ಕೆ ಮಾಡದ ಸಮಿತಿಯ ಕ್ರಮವನ್ನುಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಶೂಟರ್‌ ಅಭಿನವ್ ಬಿಂದ್ರಾ ಅವರು ಟೀಕಿಸಿದ್ದರು. ಇದರಿಂದ ಭಾರಿ ವಿವಾದವೇ ಸೃಷ್ಟಿಯಾಗಿತ್ತು.

43 ವರ್ಷದ ರಾಣಾ ಅವರು ಏಷ್ಯನ್‌ ಕ್ರೀಡಾಕೂಟದಲ್ಲಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಮನು ಭಾಕರ್‌, ಸೌರಭ್‌ ಚೌಧರಿ ಹಾಗೂ ಅನೀಶ್‌ ಭನವಾಲಾ ಅವರಂತಹ ವಿಶ್ವದರ್ಜೆಯ ಯುವ ಶೂಟರ್‌ಗಳನ್ನು ಸಜ್ಜುಗೊಳಿಸಿದ ಹಿರಿಮೆ ಅವರದು.

ರಾಣಾ ಅವರಲ್ಲದೆ ಹಾಕಿ ಕೋಚ್‌ಗಳಾದ ರೋಮೇಶ್‌ ಪಠಾಣಿಯಾ ಹಾಗೂ ಜ್ಯೂಡ್‌ ಫೆಲಿಕ್ಸ್‌ ಮತ್ತು ವುಷು ಕೋಚ್‌ ಕುಲದೀಪ್‌ ಪಠಾಣಿಯಾ ಅವರನ್ನೂ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿಯ ಧ್ಯಾನ್‌ಚಂದ್‌ ಪ್ರಶಸ್ತಿಗೆ 15 ಮಂದಿ ಸಾಧಕರನ್ನು ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT