ಗುರುವಾರ , ಜನವರಿ 23, 2020
20 °C

ಬ್ಯಾಡ್ಮಿಂಟನ್‌ ಟೂರ್ನಿ: ಮೆಯಿರಾಬಾ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಢಾಕಾ (ಪಿಟಿಐ): ಭಾರತದ ಮೈಸ್ನಾಮ್‌ ಮೆಯಿರಾಬಾ ಲುವಾಂಗ್‌ ಅವರು ಬಾಂಗ್ಲಾದೇಶ ಜೂನಿಯರ್‌ ಇಂಟರ್‌ನ್ಯಾಷನಲ್‌ ಸೀರಿಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ನಡೆದ ಬಾಲಕರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಮಣಿಪುರದ ಮೆಯಿರಾಬಾ 21–14, 21–18 ನೇರ ಗೇಮ್‌ಗಳಿಂದ ಮಲೇಷ್ಯಾದ ಕೆನ್‌ ಯೊಂಗ್‌ ಒಂಗ್‌ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ 38 ನಿಮಿಷ ನಡೆಯಿತು.

ಇದಕ್ಕೂ ಮೊದಲು ನಡೆದಿದ್ದಸೆಮಿಫೈನಲ್‌ನಲ್ಲಿ ಮೆಯಿರಾಬಾ ಅವರು ಮಲೇಷ್ಯಾದ ಮತ್ತೊಬ್ಬ ಅಟಗಾರ ಫಜರಿಕ್‌ ಮೊಹಮ್ಮದ್‌ ರಾಜಿಫ್‌ ವಿರುದ್ಧ ಗೆದ್ದಿದ್ದರು. ಭಾರತದ ಆಟಗಾರ ಈ ಋತುವಿನಲ್ಲಿ ಜಯಿಸಿದ ಎರಡನೇ ಬಿಡಬ್ಲ್ಯುಎಫ್‌ ಜೂನಿಯರ್‌ ಪ್ರಶಸ್ತಿ ಇದಾಗಿದೆ.

ಹೋದ ತಿಂಗಳು ನಡೆದಿದ್ದ 19 ವರ್ಷದೊಳಗಿನವರ ಕೊರಿಯಾ ಓಪನ್‌ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಟೂರ್ನಿಯಲ್ಲೂ ಅವರು
ಚಾಂಪಿಯನ್‌ ಆಗಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು