ಸೋಮವಾರ, ಆಗಸ್ಟ್ 26, 2019
27 °C

ಕಬಡ್ಡಿ: ರಾಹುಲ್ ‘ಸೂಪರ್’ ಆಟ; ತಲೈವಾಸ್‌ ಜಯಭೇರಿ

Published:
Updated:
Prajavani

ಪಾಟ್ನ (ಪಿಟಿಐ): ಇಲ್ಲಿನ ಪಾಟಲಿಪುತ್ರ ಕ್ರೀಡಾಂಗಣದಲ್ಲಿ ಭಾನುವಾರ ಸೇರಿದ್ದ ಕಬಡ್ಡಿ ಪ್ರಿಯರಿಗೆ ರಾಹುಲ್ ಚೌಧರಿ ಭರಪೂರ ರಂಜನೆ ನೀಡಿದರು. ಪ್ರೊ ಕಬಡ್ಡಿ ಲೀಗ್‌ನಲ್ಲಿ ಹರಿಯಾಣ ಸ್ಟೀಲರ್ಸ್ ಎದುರು ನಡೆದ ಪಂದ್ಯದಲ್ಲಿ ಚೌಧರಿ ಅವರ ಭರ್ಜರಿ ಆಟದ ನೆರವಿನಿಂದ ತಮಿಳ್ ತಲೈವಾಸ್‌ 35–28ರಲ್ಲಿ ಜಯಭೇರಿ ಮೊಳಗಿಸಿತು.

ಇದು ಲೀಗ್‌ನಲ್ಲಿ ತಲೈವಾಸ್ ಗಳಿಸಿದ ಎರಡನೇ ಜಯವಾಗಿದೆ. ಎರಡು ಬೋನಸ್ ಪಾಯಿಂಟ್‌ಗಳು ಒಳಗೊಂಡಂತೆ ಒಟ್ಟು 13 ರೈಡಿಂಗ್‌ ಪಾಯಿಂಟ್ ಮತ್ತು ಒಂದು ಟ್ಯಾಕಲ್‌ ಪಾಯಿಂಟ್‌ ಗಳಿಸಿದ ರಾಹುಲ್ ಚೌಧರಿ ಈ ಋತುವಿನಲ್ಲಿ ಎರಡನೇ ಬಾರಿ ಸೂಪರ್ ಟೆನ್ ಸಾಧನೆ ಮಾಡಿದರು.

ಅಜಯ್ ಠಾಕೂರ್ ಒಂದು ಬೋನಸ್ ಒಳಗೊಂಡಂತೆ ಒಟ್ಟು ಐದು ರೈಡಿಂಗ್‌ ಪಾಯಿಂಟ್ ಗಳಿಸಿದರೆ ಮಂಜೀತ್ ಚಿಲ್ಲಾರ್ ಮೂರು ಟ್ಯಾಕಲ್ ಪಾಯಿಂಟ್ ತಂದುಕೊಟ್ಟರು. 

ಹರಿಯಾಣ ಪರ ವಿಕಾಸ್ ಖಂಡೋಲ 8, ನವೀನ್ 5, ವಿನಯ್‌ 4 ಮತ್ತು ವಿಕಾಸ್ ಕಾಳೆ 3 ಪಾಯಿಂಟ್ ಗಳಿಸಿದರು. 

ತವರಿನಲ್ಲಿ ಸೋಲು: ಮತ್ತೊಂದು ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ತಂಡ ತವರಿನಲ್ಲಿ ನಿರಾಸೆಗೆ ಒಳಗಾಯಿತು. ಪುಣೆ ಪಲ್ಟನ್ ಎದುರಿನ ಪಂದ್ಯದಲ್ಲಿ ತಂಡ 20–41ರಲ್ಲಿ ಸೋತಿತು. ಪುಣೆ ಪರ ಅಮಿತ್ ಕುಮಾರ್ 9, ಮಂಜೀತ್‌ 6, ಗಿರೀಶ್ ಮಾರುತಿ ಎರ್ನಕ್ 4 ಪಾಯಿಂಟ್ ಗಳಿಸಿದರು. ಪಟ್ನಾಗಾಗಿ ಪ್ರದೀಪ್ ನರ್ವಾಲ್ ಏಕಾಂಗಿ ಹೋರಾಟ ಮಾಡಿದರು. ಅವರು 6 ಪಾಯಿಂಟ್ ಗಳಿಸಿದರು. 

Post Comments (+)