ಸೋಮವಾರ, ನವೆಂಬರ್ 28, 2022
20 °C

ಏಷ್ಯನ್‌ ಎಲೈಟ್‌ ಬಾಕ್ಸಿಂಗ್‌ : ಕಪಿಲ್‌, ಸ್ಪರ್ಶ್‌ಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಕಪಿಲ್‌ ಪೋಖರಿಯಾ ಮತ್ತು ಸ್ಪರ್ಶ್‌ ಕುಮಾರ್‌ ಅವರು ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಎಲೈಟ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸೋಲು ಅನುಭವಿಸಿದರು.

ಗುರುವಾರ ನಡೆದ 86 ಕೆ.ಜಿ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಕಪಿಲ್‌ 0–5 ರಲ್ಲಿ ಇರಾನ್‌ನ ಪೌರಿಯಾ ಅಮೀರಿ ಕೈಯಲ್ಲಿ ಸೋತರು. ಉತ್ತರಾಖಂಡ್‌ನ ಬಾಕ್ಸರ್‌ ಆರಂಭದಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡಿದರೂ, ಬಳಿಕ ಲಯ ಕಳೆದುಕೊಂಡರು.

51 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಸ್ಪರ್ಶ್‌ 1–4 ರಲ್ಲಿ ಒಲಿಂಪಿಕ್‌ ಕಂಚಿನ ಪದಕ ವಿಜೇತ ಬಾಕ್ಸರ್‌ ಕಜಕಸ್ತಾನದ ಸಕೆನ್ ಬಿಬೊಸಿನೊವ್‌ ಎದುರು ಸೋತರು.

ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಸವಿತಾ ಅವರು ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಜಪಾನ್‌ನ ಸುಕಿಮಿ ನಮಿಕಿ ಅವರ ಸವಾಲನ್ನು ಎದುರಿಸುವರು. ಶಿವ ಥಾಪಾ ಒಳಗೊಂಡಂತೆ ಭಾರತದ ಐವರು ಬಾಕ್ಸರ್‌ಗಳು ಶುಕ್ರವಾರ ಕಣಕ್ಕಿಳಿಯುವರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.