ಗುರುವಾರ , ಜೂನ್ 30, 2022
22 °C

ಟೇಬಲ್‌ ಟೆನಿಸ್‌: ರಾಜ್ಯದ ಆಟಗಾರರಿಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಮತ್ತು ಯೂತ್ ಟೇಬಲ್‌ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಆಟಗಾರರು ಬುಧವಾರ ನಿರಾಸೆ ಅನುಭವಿಸಿದರು.

ಜೂನಿಯರ್ ಬಾಲಕರ ವಿಭಾಗದಲ್ಲಿ ಸಮ್ಯಕ್ ಕಶ್ಯಪ್‌ ಪ್ರೀಕ್ವಾರ್ಟರ್‌ಫೈನಲ್‌ವರೆಗೆ ತಲುಪಿದ್ದರು. ಆದರೆ ಬಂಗಾಳದ ಸೌಮ್ಯದೀಪ್ ಸರ್ಕಾರ್ ವಿರುದ್ಧ 8-11,9-11,10-12ರಿಂದ ವೀರೋಚಿತ ಸೋಲು ಅನುಭವಿಸಿದರು. ಆದರೆ ಯೂತ್ ವಿಭಾಗದಲ್ಲಿ ಸಮ್ಯಕ್ ಮೊದಲ ಸುತ್ತಿನ ಪಂದ್ಯದಲ್ಲೇ 7-11,12-10,11-8,6-11,10-12ರಿಂದ ಯೆಂಗ್‌ಕೋಮ್‌ ಕೆ. ಎದುರು ಮಣಿದರು.

ಜೂನಿಯರ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಆಕಾಶ್ ಕೆ.ಜೆ 11-6,6-11,4-11,3-11ರಿಂದ ಉತ್ತರ ಪ್ರದೇಶದ ದಿವ್ಯಾಂಶ್ ಶ್ರೀವಾತ್ಸವ್ ಎದುರು ಸೋತರು.

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಶ್ರೀಕಾಂತ್ ಕಶ್ಯಪ್‌ ಹಾಗೂ ರೋಹಿತ್ ಶಂಕರ್ ಅವರಿಗೂ ಮೊದಲ ಸುತ್ತಿನ ತಡೆ ದಾಟಲಾಗಲಿಲ್ಲ. ಶ್ರೀಕಾಂತ್‌ 6-11,6-11,9-11ರಿಂದ ಸಂತೋಚ್ ಎ.ಪಿ. ಎದುರು, ರೋಹಿತ್ 6-11,5-11,3-11ರಿಂದ ಅಭಿಲಾಷ್ ರಾವಲ್ ವಿರುದ್ಧ ಸೋಲು ಕಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು