ಶನಿವಾರ, ಜನವರಿ 28, 2023
21 °C

ಮಹಿಳಾ ಕಬಡ್ಡಿ: ಕೇರಳ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ): ಪಟ್ಟಣದ ಕೆಎಲ್‌ಇ ಸಂಸ್ಥೆಯ ಮೈದಾನದಲ್ಲಿ ಸಿದ್ದು ಕೊಣ್ಣೂರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸೋಮವಾರ ರಾತ್ರಿ ನಡೆದ ಅಖಿಲ ಭಾರತ ‘ಎ’ ಗ್ರೇಡ್ ಆಹ್ವಾನಿತ ಮಹಿಳಾ ಕಬಡ್ಡಿ  ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಕೇರಳ ತಂಡ ಶುಭಾರಂಭ ಮಾಡಿತು.

ಹುಬ್ಬಳ್ಳಿಯ ಬಿ.ಸಿ.ರಮೇಶ ಅಕಾಡೆಮಿ ತಂಡದ ವಿರುದ್ಧ 25-31 ರಿಂದ ಕೇರಳ ತಂಡ ಜಯಿಸಿತು. ಪ್ರಥಮಾರ್ಧದಲ್ಲಿ 11–11 ಸಮಬಲ ಸಾಧಿಸಿದ ಎರಡೂ ತಂಡಗಳ ಮಧ್ಯೆ ತೀವ್ರ ಸೆಣಸಾಟ ನಡೆಯಿತು. ಹುಬ್ಬಳ್ಳಿ ಬಿ.ಸಿ.ರಮೇಶ ಅಕಾಡೆಮಿ ತಂಡದ ರಕ್ಷಣಾ ತಂತ್ರಗಳು ಫಲ ನೀಡಲಿಲ್ಲ. ಎದುರಾಳಿ ಕೇರಳ ತಂಡವನ್ನು ಕಟ್ಟಿಹಾಕುವಲ್ಲಿ ವಿಫಲಗೊಂಡು ಸೋಲು ಅನುಭವಿಸಿತು.

ಇನ್ನೊಂದು ಪಂದ್ಯದಲ್ಲಿ ಮುಂಬೈ ತಂಡವು ಹಾವೇರಿ ತಂಡದ ವಿರುದ್ಧ 30–10 ರಿಂದ ಭರ್ಜರಿ ಗೆದ್ದಿತು. ಹಾವೇರಿ ತಂಡಕ್ಕೆ ಯಾವುದೇ ಹಂತದಲ್ಲಿಯೂ ಮೇಲುಗೈ ಸಾಧಿಸಲು ಅವಕಾಶ ನೀಡದ ಮುಂಬೈ ತಂಡ ಪ್ರಥಮಾರ್ಧದಲ್ಲಿ 17 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಕೊನೆಯವರೆಗೂ ಬಿಗಿಹಿಡಿತ ಸಾಧಿಸಿದ ಮುಂಬೈ ತಂಡ ನಿರಾಯಾಸವಾಗಿ ಗೆಲುವನ್ನು ಒಲಿಸಿಕೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು