ಭಾನುವಾರ, ಸೆಪ್ಟೆಂಬರ್ 22, 2019
22 °C

ಕೊಡವ ಹಾಕಿ ಮುಕ್ಕಾಟಿರಕ್ಕೆ ಗೆಲುವು

Published:
Updated:

ಮಡಿಕೇರಿ: ಮುಕ್ಕಾಟಿರ ತಂಡವು ಕೊಡವ ಕೌಟುಂಬಿಕ ಚಾಂಪಿಯನ್ಸ್‌ ಲೀಗ್‌ ಹಾಕಿ ಟೂರ್ನಿಯಲ್ಲಿ ಶುಕ್ರವಾರ ಗೆದ್ದು ಮುಂದಿನ ಸುತ್ತಿಗೆ ಪ್ರವೇಶಿಸಿತು.

ಸಮೀಪದ ಕಾಕೋಟುಪರಂಬು ಮೈದಾನದಲ್ಲಿ ಹಾಕಿ ಕೂರ್ಗ್‌ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮುಕ್ಕಾಟಿರ ತಂಡವು 5-1 ಗೋಲುಗಳಿಂದ ಚೆಪ್ಪುಡಿರ ತಂಡವನ್ನು ಸೋಲಿಸಿತು.

ಮುಕ್ಕಾಟಿರ ಪರವಾಗಿ ಕರುಂಬಯ್ಯ ಎರಡು ಗೋಲು, ಚಿರನ್, ವಸಂತ್, ಪೂಣಚ್ಚ ತಲಾ ಒಂದೊಂದು ಗೋಲು ದಾಖಲಿಸಿದರು. ಕರುಂಬಯ್ಯ ಅವರ ಅಮೋಘ ಆಟಕ್ಕೆ ಚಪ್ಪುಡಿರ ತಂಡ ಗೋಲು ಗಳಿಸಲು ಪರದಾಡಿತು.

ಮಂಡೇಪಂಡ ತಂಡವು 2-0 ಗೋಲುಗಳಿಂದ ಪಳಂಗಂಡ ತಂಡವನ್ನು ಪರಾಭಗೊಳಿಸಿತು. ಮಂಡೇಪಂಡ ಪರ ಸಜನ್, ಕವನ್ ತಲಾ ಒಂದೊಂದು ಗೋಲು ತಂದಿತ್ತರು.

ಇದೇ ಮೈದಾನದಲ್ಲಿ ನಡೆದ ‘ಚಾಂಪಿಯನ್ಸ್‌ ಟ್ರೋಫಿ’ ಹಾಕಿಯ ಟೂರ್ನಿಯ ನಾಕೌಟ್ ಪಂದ್ಯದಲ್ಲಿ ಸೊಮೇಯಂಡ ತಂಡವು 3-2 ಗೋಲುಗಳಿಂದ ಬೊಳ್ಳಂಡ ತಂಡವನ್ನು ಮಣಿಸಿತು.

ವಿಜೇತ ತಂಡದ ಅಪ್ಪಚ್ಚು ಎರಡು ಗೋಲು ದಾಖಲಿಸಿದರೆ, ಅಪ್ಪಯ್ಯ ಒಂದು ಗೋಲು ತಂದಿತ್ತರು. ಬೊಳ್ಳಂಡ ತಂಡದ ಪರವಾಗಿ ನಿರನ್‌, ಮುತ್ತಣ್ಣ ಒಂದೊಂದು ದಾಖಲಿಸಿದರು. 

 

Post Comments (+)