ಬ್ರೂಕ್ಸ್‌ ಕೊಪ್ಕಾಗೆ ಪ್ರಶಸ್ತಿ

7
ಪಿಜಿಎ ಗಾಲ್ಫ್‌ ಚಾಂಪಿಯನ್‌ಷಿಪ್‌; ಟೈಗರ್‌ ವುಡ್ಸ್‌ಗೆ ಎರಡನೇ ಸ್ಥಾನ

ಬ್ರೂಕ್ಸ್‌ ಕೊಪ್ಕಾಗೆ ಪ್ರಶಸ್ತಿ

Published:
Updated:
Deccan Herald

ಸೇಂಟ್‌ ಲೂಯಿಸ್‌: ಅಮೆರಿಕದ ಬ್ರೂಕ್ಸ್‌ ಕೊಪ್ಕಾ ಅವರು ಇಲ್ಲಿ ಮುಕ್ತಾಯಗೊಂಡ ಪಿಜಿಎ ಗಾಲ್ಫ್‌ ಚಾಂಪಿಯನ್‌ಷಿಪನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. 

ಸೋಮವಾರ ಇಲ್ಲಿನ ಬೆಲ್ಲೆರೀವ್‌ ಗಾಲ್ಫ್‌ ಕೋರ್ಸ್‌ನಲ್ಲಿ ನಡೆದ ಕೊನೆಯ ಸುತ್ತಿನಲ್ಲಿ ಅವರು 66 ಸ್ಕೋರ್‌ ಗಳಿಸಿದರು. ಒಟ್ಟು 264 ಸ್ಕೋರ್‌ ಸಂಗ್ರಹಿಸಿದ ಅವರು ಚಾಂಪಿಯನ್‌ ಆದರು. ಇದರೊಂದಿಗೆ 28 ವರ್ಷದ ಗಾಲ್ಫರ್‌, ಅಮೆರಿಕದವರೇ ಆದ ಟೈಗರ್‌ ವುಡ್ಸ್‌ ಅವರನ್ನು ಹಿಂದಿಕ್ಕಿದರು.

ಐದು ವರ್ಷಗಳಲ್ಲಿ ಯಾವುದೇ ಪ್ರಶಸ್ತಿ ಗೆಲ್ಲದ ಟೈಗರ್‌ ಅವರು ಈ ಟೂರ್ನಿಯಲ್ಲಿ ಆರಂಭದಿಂದಲೂ ಉತ್ತಮ ಆಟ ಆಡಿದ್ದರು. ಆದರೆ, ಕೊನೆಯ ಸುತ್ತಿನಲ್ಲಿ ಎಡವಿದರು. ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಆಸ್ಟ್ರೇಲಿಯಾದ ಆಡಂ ಸ್ಕಾಟ್‌ ಅವರು ಮೂರನೇ ಸ್ಥಾನ ಗಳಿಸಿದರು. 

‘ಟೂರ್ನಿಯಲ್ಲಿ ಅಗ್ರಸ್ಥಾನ ಪಡೆದಿದ್ದು ಸಂತಸ ತಂದಿದೆ. ಟೈಗರ್‌ ವುಡ್ಸ್‌, ಆಡಂ ಸ್ಕಾಟ್‌ ಅವರಂತಹ ಶ್ರೇಷ್ಠ ಆಟಗಾರರ ಎದುರು ಪಡೆದ ಈ ಗೆಲುವು ನಿಜಕ್ಕೂ ವಿಶೇಷ. ಟೂರ್ನಿಯ ಆರಂಭದ ದಿನದಿಂದಲೂ ನಾನು ತೋರಿದ ಸಾಮರ್ಥ್ಯ ತೃಪ್ತಿ ತಂದಿದೆ’ ಎಂದು ಬ್ರೂಕ್ಸ್‌ ಕೊಪ್ಕಾ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !