ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಕ್ವೆಸ್ಟ್ರಿಯನ್: ಟೆಂಟ್ ಪೆಗ್ಗಿಂಗ್‌ನಲ್ಲಿ ಕೃಷ್ಣರಾಜ್‌ಗೆ 13 ಪದಕ

Last Updated 11 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಕೃಷ್ಣರಾಜ್ ಸಿಂಗ್ ಜಾಡೊನ್ ಅವರು ಗೌತಮ ಬುದ್ಧ ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಈಕ್ವೆಸ್ಟ್ರಿಯನ್‌ ಚಾಂಪಿಯನ್‌ಷಿಪ್‌ನ ಟೆಂಟ್‌ ಪೆಗ್ಗಿಂಗ್ ವಿಭಾಗದಲ್ಲಿ ಒಟ್ಟು 13 ಪದಕಗಳನ್ನು ಗೆದ್ದಿದ್ದಾರೆ. ಉತ್ತರಪ್ರದೇಶ ಹಾರ್ಸ್ ಷೋ ಮತ್ತು ನೊಯಿಡಾ ಹಾರ್ಸ್ ಷೋಗಳಲ್ಲಿ ಅವರು ಸಾಧನೆ ಮಾಡಿದ್ದಾರೆ.

ಟ್ರಾಟ್ ಕ್ಯಾರಟ್ ಮತ್ತು ಪೆಗ್‌, ಮೌಂಟ್‌ ಸ್ಟಿಕ್ ಮತ್ತು ವಾಲ್ ರೇಸ್‌ಗಳಲ್ಲಿ ಚಿನ್ನದ ಪದಕಗಳನ್ನು ಗಳಿಸಿರುವ ಕೃಷ್ಣರಾಜ್‌ ‘ತಿಂಗಳುಗಳಿಂದ ಅಭ್ಯಾಸ ಮಾಡಿದ್ದೆ. ಇದಕ್ಕೆ ತಕ್ಕ ಫಲ ಸಿಕ್ಕಿದೆ. ಹತ್ತಕ್ಕೂ ಹೆಚ್ಚು ಪದಕಗಳು ಲಭಿಸಿದ್ದರಿಂದ ಅತೀವ ಖುಷಿಯಾಗಿದೆ. ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡಲು ಇದು ನೆರವಾಗಲಿದೆ’ ಎಂದರು.

ಚಾಂ‍ಪಿಯನ್‌ಷಿಪ್‌ನಲ್ಲಿ 148 ಸವಾರರು ಮತ್ತು 170 ಕುದುರೆಗಳು ಪಾಲ್ಗೊಂಡಿದ್ದವು. ಏಷ್ಯಾ ಒಲಿಂಪಿಕ್ ಸಮಿತಿ 1982ರಲ್ಲಿ ಟೆಂಟ್ ಪೆಗ್ಗಿಂಗ್ ಕ್ರೀಡೆಯನ್ನು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸೇರ್ಪಡೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT