ಶುಕ್ರವಾರ, ಅಕ್ಟೋಬರ್ 30, 2020
23 °C

ಬ್ರಿಟಿಷ್‌ ಫಾರ್ಮುಲಾ 3: ಖುಷ್‌‌ ಮೈನಿಗೆ ಎರಡನೇ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಿಚೆಸ್ಟರ್‌ಶೈರ್‌ (ಇಂಗ್ಲೆಂಡ್)‌: ಭಾರತದ ಖುಷ್‌ ಮೈನಿ ಅವರು ಬ್ರಿಟಿಷ್‌ ಫಾರ್ಮುಲಾ ತ್ರಿ ಚಾಂಪಿಯನ್‌ಷಿಪ್‌ನ ಮೂರನೇ ರೇಸ್‌ನಲ್ಲಿ ಗೆಲ್ಲುವ ಮೂಲಕ ಈ ವರ್ಷದಲ್ಲಿ ಎರಡನೇ ಜಯ ಸಂಪಾದಿಸಿದರು.

ಇಲ್ಲಿಯ ಡೊನಿಂಗ್ಟನ್ ಪಾರ್ಕ್‌ನಲ್ಲಿ ನಡೆದ ರೇಸ್‌ನಲ್ಲಿ ಅವರು ಪ್ರತಿಸ್ಪರ್ಧಿ ಕಯಲೆನ್‌ ಫ್ರೆಡರಿಕ್‌ ಅವರ ಸವಾಲು ಮೀರಿದರು. 14 ರೇಸ್‌ಗಳಲ್ಲಿ ಮೈನಿ ಅವರು 9ನೇ ಬಾರಿ ‘ಪೋಡಿಯಂ ಫಿನಿಷ್‌‘ ಸಾಧನೆ ಮಾಡಿದರು. 

ಈ ಗೆಲುವಿನೊಂದಿಗೆ ಮೈನಿ ಅವರು ಪಾಯಿಂಟ್‌ಗಳನ್ನು 296ಕ್ಕೆ ಹೆಚ್ಚಿಸಿಕೊಂಡರು. ಇನ್ನೂ 10 ರೇಸ್‌ಗಳು ಬಾಕಿ ಇದ್ದು ಸದ್ಯ ಅವರು 54 ಪಾಯಿಂಟ್‌ಗಳ‌ ಮುನ್ನಡೆಯಲ್ಲಿದ್ದಾರೆ.

‘ಫ್ರೆಡರಿಕ್‌ ಅವರನ್ನು ಮೊದಲ ಲ್ಯಾಪ್‌ನಲ್ಲಿ ಹಿಂದಿಕ್ಕುತ್ತೇನೆ ಎಂಬ ವಿಶ್ವಾಸವಿತ್ತು. ಅದೃಷ್ಟವಶಾತ್‌ ಉತ್ತಮ ಆರಂಭವೂ ಸಿಕ್ಕಿತು. ಇದರಿಂದ ಫ್ರೆಡರಿಕ್‌ ಮೇಲೆ ಒತ್ತಡ ಹೇರಲು ಸಾಧ್ಯವಾಯಿತು‘ ಎಂದು ರೇಸ್‌ ಬಳಿಕ ಮೈನಿ ಪ್ರತಿಕ್ರಿಯಿಸಿದರು.

‘ಇನ್ನೂ ಸಾಕಷ್ಟು ರೇಸ್‌ಗಳಿದ್ದು, ಇದೇ ಲಯವನ್ನು ಮುಂದುವರಿಸುವ ವಿಶ್ವಾಸವಿದೆ‘ ಎಂದೂ ಮೈನಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.