ಬುಧವಾರ, ಮೇ 25, 2022
29 °C

ಆಲ್ ಇಂಗ್ಲೆಂಡ್‌ ಓಪನ್: ಮಾರ್ಕ್ ಕಲ್ಜೊವ್‌ಗೆ ಮಣಿದ ಲಕ್ಷ್ಯಸೇನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬರ್ಮಿಂಗ್‌ಹ್ಯಾಂ: ಭಾರತದ ಯುವ ಆಟಗಾರ ಲಕ್ಷ್ಯ ಸೇನ್ ಅವರು ಆಲ್‌ ಇಂಗ್ಲೆಂಡ್‌ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ನಿರಾಸೆ ಅನುಭವಿಸಿದರು. ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಮಾರ್ಕ್ ಕಲ್ಜೊವ್‌ ಎದುರು ಸೇನ್ 17-21, 21-16, 17-21ರಲ್ಲಿ ಸೋತರು.

ಮಹಿಳೆಯರ ಡಬಲ್ಸ್‌ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಕೂಡ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದರು. 

55 ನಿಮಿಷಗಳ ಹಣಾಹಣಿಯ ಎರಡನೇ ಗೇಮ್‌ನಲ್ಲಿ ಲಕ್ಷ್ಯ ಸೇನ್ ಎದುರಾಳಿಗೆ ತಿರುಗೇಟು ನೀಡಿದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಮತ್ತೆ ಆಧಿಪತ್ಯ ಸ್ಥಾಪಿಸಿದ ಕಲ್ಜೊವ್ ಪಂದ್ಯ ಗೆದ್ದು ಸಂಭ್ರಮಿಸಿದರು.

ಅಶ್ವಿನಿ ಮತ್ತು ಸಿಕ್ಕಿ ರೆಡ್ಡಿ ನೆದರ್ಲೆಂಡ್ಸ್‌ನ ಸೆಲೆನಾ ಪೀಕ್ ಮತ್ತು ಚೆರಿಲ್ ಸೀನೆನ್‌ ಜೋಡಿಗೆ 22-24, 12-21ರಲ್ಲಿ ಮಣಿದರು. ಈ ಪಂದ್ಯ 39 ನಿಮಿಷಗಳಲ್ಲಿ ಮುಗಿಯಿತು. ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಡೆನ್ಮಾರ್ಕ್‌ನ ಕಿಮ್ ಆಸ್ಟ್ರುಪ್‌ ಮತ್ತು ಆ್ಯಂಡೆರ್ಸ್‌ ಸ್ಕಾರುಪ್ ಎದುರು 16-21, 21-11, 17-21ರಲ್ಲಿ ಸೋತರು.

 ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ವರ್ಮಾ ಡೆನ್ಮಾರ್ಕ್‌ನ ಆ್ಯಂಡೆರ್ಸ್ ಆ್ಯಂಟೊನ್ಸೆನ್‌ ವಿರುದ್ಧ 20–22, 10–21ರಲ್ಲಿ ಪರಾಭವಗೊಂಡರು. ಮಿಶ್ರ ಡಬಲ್ಸ್‌ನಲ್ಲಿ ಧ್ರುವ ಕಪಿಲಾ ಮತ್ತು ಮೇಘನಾ ಜಕ್ಕಂಪುಡಿ ಜೋಡಿ ಡೆನ್ಮಾರ್ಕ್‌ನ ನಿಕ್ಲಾಸ್ ನೊಹ್ರ್‌ ಮತ್ತು ಅಮೇಲಿ ಮಗೆಲುಂಡ್ ಜೋಡಿಗೆ 19–21, 8–21ರಲ್ಲಿ ಮಣಿಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು